ಉದಯವಾಹಿನಿ, ವಿಜಯಪುರ :ಭಾರತ ಹುಣ್ಣಿಮೆಯಂದು ನಡೆಯುವ ಶ್ರೀ ಮಹಾಲಕ್ಷ್ಮೀ ಜಾತ್ರಾ ಮಹೊತ್ಸವ 4ನೇ ವರ್ಷದ ಜೀರ್ಣೋದ್ದಾರ ಜಾತ್ರಾ ಸಮಾರಂಭ ಫೆ. 11ರಂದು ಜರುಗಲಿದೆ.
ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಬಸಲಿಂಗ ಸ್ವಾಮಿಗಳು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುವರು. ಸಂಜೆ 6-30 ಗಂಟೆಗೆ ಸ್ವಯಂಬೋ ಆಟ್ಸ್ ಫೌಂಡೇಶನ್ ದಿವ್ಯಾ ಭಿಸೆ ಮತ್ತು ದೀಕ್ಷಾ ಭಿಸೆ ಇವರಿಂದ ಭರತ ನಾಟ್ಯ ನಡೆಯಲಿದೆ. ನಂತರ ಮಹಾಪ್ರಸಾದ ಇರುತ್ತದೆ.
ಫೆ. 12ರಂದು ಸುರ್ಯೋದಯದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಗೆ ಮಹಾರುದ್ರಾಭಿಷೇಕ ಉಮಾಮಹೇಶ್ವ ಪೂಜೆ ಹೋಮ ಹವನ ನೆರವೇರುವುದು. 10-30 ರಿಂದ 2ರವರೆಗೆ ಶೈಲಜಾ ಬಸನಗೌಡ ಪಾಟೀಲ (ಯತ್ನಾಳ) ಅವರಿಂದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ನಂತರ ಪ್ರಸಾದ ಇರುತ್ತದೆ. ದಿವ್ಯ ಸಾನ್ನಿಧ್ಯವನ್ನು ರಂಭಾಪುರಿ ಶಾಖಾಮಠ ಸಿಂಧನೂರ ಗುರುಮಠ ಕನ್ನೂರದ ಶ್ರೀ ಷ.ಬ್ರ.ಸೋಮನಾಥ ಶಿವಾಚಾರ್ಯ ಸ್ವಾಮಿಗಳು, ಬಬಲೇಶ್ವರದ ಶ್ರೀ ಡಾ. ಮಹಾದೇವ ಶಿವಾಚಾರ್ಯರು ಅವರು ವಹಿಸುವರು.
