ಉದಯವಾಹಿನಿ, ತುಮಕೂರು: ಜಿಲ್ಲೆಯ ತಿಪಟೂರು ಬಳಿಯ ಗಾಂಧಿನಗರದಲ್ಲಿನ ರೈಲ್ವೆ ಹಳಿಯ ಬಳಿಯಲ್ಲಿ ಲಘು ಭೂ ಕುಸಿತ ಉಂಟಾಗಿದೆ. ಈ ಹಿನ್ನಲೆಯಲ್ಲಿ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲು ಸೇರಿದಂತೆ ವಿವಿಧ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.ತುಮಕೂರು ಜಿಲ್ಲೆಯ ತಿಪಟೂರು ಗಾಂಧಿನಗರದ ಬಳಿಯ ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಂತಿತ್ತು. ಹೀಗಾಗಿ ರೈಲ್ವೆ ಹಳಿಯ ಬಳಿಯಲ್ಲೇ ಲಘು ಭೂ ಕುಸಿತವಾಗಿದೆ. ಇದೀಗ ಜೆಸಿಬಿಯಿಂದ ಭೂ ಕುಸಿತವನ್ನು ಮುಚ್ಚುವ ಕಾರ್ಯಾಚರಣೆಯಲ್ಲಿ ರೈಲ್ವೆ ಇಲಾಖೆಯ ಸಿಬ್ಬಂದಿಗಳು ನಡೆಸುತ್ತಿದ್ದಾರೆ.ರೈಲ್ವೆ ಹಳಿಯ ಬಳಿಯಲ್ಲೇ ಭೂ ಕುಸಿತಗೊಂಡ ಕಾರಣ, ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲು ಸೇರಿದಂತೆ ವಿವಿಧ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಇನ್ನೂ ಯಶವಂತಪುರ ಯಾರ್ಡ್ನಲ್ಲಿ ಸಿಗ್ನಲಿಂಗ್ ವ್ಯವಸ್ಥೆ (ವಾರ್ಷಿಕ ಕೇಬಲ್ ಮೆಗ್ಗರಿಂಗ್ ಕೆಲಸ) ನಿರ್ವಹಣೆಗಾಗಿ ಕೈಗೊಳ್ಳಬೇಕಾದ ಕೆಲಸಗಳ ಕಾರಣದಿಂದ ಯಶವಂತಪುರದಿಂದ ಹೊರಡುವ ಮತ್ತು ಯಶವಂತಪುರಕ್ಕೆ ಬರುವ ಕೆಳಗಿನ ರೈಲುಗಳನ್ನು ರದ್ದುಗೊಳಿಸಲಾಗಿದೆ / ಭಾಗಶಃ ರದ್ದುಗೊಳಿಸಲಾಗಿದೆ / ಹೊರಡುವ ಸಮಯ ಬದಲಾವಣೆ ಮಾಡಲಾಗಿದೆ.
