ಉದಯವಾಹಿನಿ, ವಿಟ್ಲ: ಕೋಳಿ ಸಾಗಾಟದ ಪಿಕಪ್ ಟೆಂಪೊ ಪಲ್ಟಿಯಾದ ಘಟನೆ ಕನ್ಯಾನ-ಕುಳಾಲು-ಸಾಲೆತ್ತೂರು ಸಂಪರ್ಕದ ಕಳೆಂಜಿಮಲೆ ರಕ್ಷಿತಾರಣ್ಯದ ಒಳರಸ್ತೆಯಲ್ಲಿ ನಡೆದಿದೆ.
ಅಪಘಾತದಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಮಿಳುನಾಡು ನೋಂದಣಿಯ ಪಿಕಪ್ ಟೆಂಪೊ ಇದಾಗಿದ್ದು, ಕನ್ಯಾನ ಜಂಕ್ಷನಿಂದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಹಾದುಹೋಗುವ ಕಡಿದಾದ ಏರು ರಸ್ತೆಯಲ್ಲಿ, ಮುಂದಿನಿಂದ ಬರುತ್ತಿದ್ದ ಇನ್ನೊಂದು ವಾಹನಕ್ಕೆ ದಾರಿ ನೀಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟೆಂಪೊ ರಸ್ತೆ ಬದಿಗೆ ಉರುಳಿದೆ.
ವಾಹನದಲ್ಲಿದ್ದ ಹಲವು ಕೋಳಿಗಳು ಮೃತಪಟ್ಟಿದ್ದು, ಸ್ಥಳೀಯರು ಅವುಗಳನ್ನು ಒಯ್ದಿದ್ದಾರೆ. ಕ್ರೇನ್ ಮೂಲಕ ವಾಹನವನ್ನು ಮೇಲೆತ್ತಲಾಯಿತು.
