ಉದಯವಾಹಿನಿ, ಮಂಗಳೂರು: ಸೇಂಟ್ ಬರ್ನಡ್್ರ ಗ್ರೇಟ್ ಡೇನ್ ನಂತಹ ದೈತ್ಯ ನಾಯಿಗಳು, ಪಮೋರಿಯನ್, ಷಿ ಟ್ರ್ಯುವಿನಂತಹ ಪುಟಾಣಿ ನಾಯಿಗಳು, ಗೋಲ್ಡನ್ ರಿಟ್ರಿವರ್‌ನಂತಹ ಮುದ್ದಾದ ನಾಯಿಗಳು… ವೇದಿಕೆಯಲ್ಲಿ ಕಸರತ್ತು ಪ್ರದರ್ಶಿಸುತ್ತಿದ್ದರೆ, ಪ್ರೇಕ್ಷಕರು ಚಪ್ಪಾಳೆ ಬಡಿದು ಮೆಚ್ಚುಗೆ ಸೂಚಿಸಿದರು.
ಕೆಲವರು ವಿವಿಧ ವಿನೋದಾವಳಿಗಳಲ್ಲಿ ತಲ್ಲೀನರಾಗಿದ್ದರು. ಇನ್ನು ಕೆಲವರು ತಮ್ಮಿಷ್ಟದ ಖಾದ್ಯಗಳನ್ನು ಸವಿಯುವುದರಲ್ಲಿ ಮಗ್ನರಾಗಿದ್ದರು.
ಕುಲಶೇಖರ ಪರಿಸರದ ವಿವಿಧ ಧರ್ಮಗಳ ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಕೊರ್ಡೆಲ್ ಪವಿತ್ರ ಶಿಲುಬೆ ಚರ್ಚ್ ನಲ್ಲಿ ಏರ್ಪಡಿಸಿದ್ದಎರಡು ದಿನಗಳ ‘ಕೊರ್ಡೆಲ್ ಖೇಳ್-ಮೇಳ್’ ಕೂಟದಲ್ಲಿ ಶನಿವಾರ ಕಂಡು ಬಂದ ದೃಶ್ಯಗಳಿವು.
ಸಾಕು ನಾಯಿಗಳ ಪ್ರದರ್ಶನ ಈ ಕೂಟದ ಪ್ರಮುಖ ಆಕರ್ಷಣೆಯಾಗಿತ್ತು. ಮಡಿಲಲ್ಲಿ ಮುದ್ರಾದ ಮಾಲೀಸ್ ತಳಿಯನ್ನು ಹಿಡಿದು ಬಂದ ಪ್ರಮೀಳಾ ಅವರ ಜೊತೆ ಗಿಡ್ಡ ತಳಿಯ ಡ್ಯಾಶ್ ಹೌಂಡ್ ನಾಯಿಯೂ ಬಾಲ ಮಿಟುಕಿಸುತ್ತಾ ಹಿಂಬಾಲಿಸಿತು. ಕುಲಶೇಖರದ ಐರಿನ್ ಅವರ ಪೊಮೋರಿಯನ್ ತಳಿಯ ನಾಯಿ ಅದರ ಬೆನ್ನಲ್ಲೇ ಸಾಗಿಬಂತು. ಈ ಪುಟಾಣಿ ನಾಯಿಗಳ ವಯ್ಯಾರಕ್ಕೆ ಪ್ರೇಕ್ಷಕರು ಮಾರುಹೋದರು. ಕುಲಶೇಖರದ ಪ್ರವೀಣ್ ಅವರ ‘ಸೇಂಟ್ ಬರ್ನಾರ್ಡ್’, ಜಾರ್ಜ್ ಸಿಕ್ಕೇರಾ ಅವರ ‘ಗ್ರೇಟ್ ಡೇನ್, ಸುನಿಲ್ ಅವರ ‘ರಾಲರ್’ ತಳಿಯ ನಾಯಿಗಳ ಗಾಂಭೀರ್ಯ ಕಂಡು ನಿಬ್ಬೆರಗಾದ ಪ್ರೇಕ್ಷಕರು ಅವುಗಳನ್ನು ತದೇಕ ಚಿತ್ತದಿಂದ ಕಣ್ಣುಂಬಿಕೊಂಡರು. ಡಾಬರ್‌ಮನ್, ಮುಧೋಳ್, ಗ್ರೇ ಹೌಂಡ್ ನಾಯಿಗಳು ತಮ್ಮ ಚೇಷ್ಟೆಗಳ ಮೂಲಕ ಗಮನ ಸೆಳೆದವು.
