ಉದಯವಾಹಿನಿ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಅಭಿವೃದ್ದಿಗಾಗಿ ಬೃಹತ್ ಗಾತ್ರದ ಬಿಬಿಎಂಪಿಯು ಚಿಕ್ಕ ಚಿಕ್ಕ ಪಾಲಿಕೆಗಳಾಗಬೇಕು ಎಂದು ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿ ಅಧ್ಯಕ್ಷ ರಿಜ್ವಾನ್ ಆರ್ಷದ್ ಹೇಳಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ವ್ಯಾಪ್ತಿಯ ಪೂರ್ವ ವಲಯದಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ಸಾರ್ವಜನಿಕರಿಂದ ಸಲಹೆ ಮತ್ತು ಅಭಿಪ್ರಾಯ ಸ್ವೀಕರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಂದೇ ವೇದಿಯಲ್ಲಿಯಲ್ಲಿ ಸಮನ್ವಯ ಇದ್ದರೆ ಉತ್ತಮ ಆಡಳಿತ ನೀಡಲು ಸಾಧ್ಯ.
ಎಲ್ಲಿ ಏನು ಬದಲಾವಬಣೆಗಳಾಗಬೇಕು. ಚರ್ಚಿಸಿ ಅಂತಿಮಗೊಳಿಸಲಾಗುತ್ತದೆ. ಎಲ್ಲರೂ ತಮ್ಮ ತಮ್ಮ ಸಲಹೆಗಳನ್ನು ನೀಡಬಹುದು ಎಂದು ಹೇಳಿದರು.
ಬೆಂಗಳೂರು ನಗರದ ಆಡಳಿತ ಉತ್ತಮ ಮಟ್ಟದ ಆಡಳಿತ ಆಗಿರಬೇಕು. ನಗರ ಬೆಳವಣಿಗೆ, ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳು ಸುಲಭವಾಗಿ ಸಿಗುವಂತಾಗೇಕು. ನಗರಲ್ಲಿ ಅಭಿವೃದ್ಧಿ, ರೋಬೋ ವ್ಯವಸ್ಥೆ ತಯಾರಾಗಬೇಕು ಎಂದು ನುಡಿದರು.
ವಿಧೇಯಕವನ್ನು ತಯಾರು ಆಗುತ್ತಿದ್ದು, ಈಗಾಗಲೇ ಬಹುತೇಕ ಚರ್ಚೆಗಳಾಗಿದೆ. ಸಮಿತಿಗೆ ೧೭ ಸಭೆಗಳನ್ನು ಮಾಡಲಾಗಿದೆ. ಪಾಲುದಾರರ ಜೊತೆ ಚರ್ಚಿಸಲಾಗಿದೆ. ಅದರ ಬಹು ಆಯಾಮಗಳಲ್ಲಿ ಚರ್ಚಿಸಿ ವಿಧೇಯಕ ಸಿದ್ದಪಡಿಸಲಾಗಿದೆ.
ನಗರದಲ್ಲಿ ೬ ಕಡೆ ಸಮಾಲೋಚನೆ ಯನ್ನು ನಡೆಸಲಾಗುತ್ತಿದೆ. ತಮ್ಮ ಸೂಚನೆ ಸಲಹೆಗಳು ಪ್ರಮುಖ, ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ೮೭೦ ಚ.ಕಿ.ಮೀ ವ್ಯಾಪ್ತಿಯಲ್ಲಿ ಬೆಳೆದಿದೆ. ಮೇಯರ್ ಅವಧಿ ಹೆಚ್ಚಳ, ಆಡಳಿತ ಸುಧಾರಣೆ ಕಾಯ್ದೆ ಮುಖಾಂತರ ಆಗಬೇಕಿದೆ. ನಗರವನ್ನು ಪುನರ್ ನಿರ್ಮಾಣ ಮಾಡಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಂಟಕವಾಗಲಿದೆ ಎಂದೂ ಅವರು ಹೇಳಿದರು.
