ಉದಯವಾಹಿನಿ, ಬೈಲಹೊಂಗಲ: ಮಹಾತ್ಮರ ಜೀವನ ಚರಿತ್ರೆಯ ಪ್ರವಚನಗಳನ್ನು ಆಲಿಸಿ, ಜೀವನದಲ್ಲಿ ಅಳವಡಿಸಿಕೊಳ್ಳುವದರಿಂದ ಬದುಕು ಬಂಗಾರವಾಗಲಿದೆ ಎಂದು ಹೊಸೂರ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಶಾಖಾ ಮೂರುಸಾವಿರ ಮಠದ ಶ್ರೀ ನೀಲಕಂಠ ಮಹಾಶಿವಯೋಗಿಶ್ವರರ ಜಾತ್ರಾ ಮಹೋತ್ಸವ ೨೦೨೫ ಹಾಗೂ ಶಿಕ್ಷಣ ಕ್ಷೇತ್ರದ ಹರಿಕಾರ ಲಿಂ. ಗಂಗಾಧರ ಮಹಾಸ್ವಾಮೀಜಿ ಅವರ ೭೨ ನೇ ಜಯಂತ್ಯೋತ್ಸವ ಹಾಗೂ ಮಹಾ ಶಿವರಾತ್ರಿ ಉತ್ಸವ ಅಂಗವಾಗಿ ಫೆ.೨೫ ರವರೆಗೆ ನಡೆಯಲಿರುವ ಮಹಾದಾಸೋಹಿ ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಪಟ್ಟಣದ ಮೂರುಸಾವಿರ ಮಠದ ಲಿಂ.ಗAಗಾಧರ ಅಪ್ಪನವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಧಾರ್ಮಿಕತೆಯ, ಶೈಕ್ಷಣಿಕ ಕಾರ್ಯಗಳನ್ನು ಅಚ್ಚುಕಟ್ಟಾಗಿ ನೆರವೇರಿಸುತ್ತಾ ಸಮಾಜದಲ್ಲಿ ಶಾಂತಿ ನೆಲೆಸಲು, ಸಮಾಜದ ಅಭಿವೃದ್ದಿಗೆ ಶ್ರಮಮಿಸುತ್ತಿರುವ ಪ್ರಭುನೀಲಕಂಠ ಸ್ವಾಮೀಜಿ ಅವರ ಕಾರ್ಯ ಶ್ಲಾಘನೀಯ ಎಂದರು.
ಲಿಂ.ಗAಗಾಧರ ಪೂಜ್ಯರು ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಫಲವಾಗಿ ಇಂದು ಶ್ರೀಮಠದ ಆಶ್ರಯಲ್ಲಿ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಸೇರಿ ಅನೇಕ ಶಿಕ್ಷಣ ಸಂಸ್ಥೆಗಳು ಹೆಮ್ಮರವಾಗಿ ಬೆಳೆದು ನಾಡಿಗೆ ಆಸರೆಯಾಗಿವೆ. ಶ್ರೀಮಠವು ಸೌಹಾರ್ದಯುತ, ಶಾಂತಿಯ ಬೀಡಾಗಿದೆ ಎಂದರು.
ಶಿವಾನಂದ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ ಪ್ರವಚನ ಉದ್ಘಾಟಿಸಿ ಮಾತನಾಡಿ,ಸಮಾಜದ ಉದ್ಧಾರಕ್ಕಾಗಿ ಪುರಾತನ ಕಾಲದಿಂದಲೂ ಮಹಾತ್ಮರು ಸಮಾಜಕ್ಕೆ ಉಪದೇಶ, ಪ್ರವಚನ ನೀಡುತ್ತಾ ಬಂದ ಪರಂಪರೆ ನಮ್ಮ ದೇಶದಲ್ಲಿ ನಡೆದು ಬಂದ ಪರಂಪರೆಯಾಗಿದೆ.
