ಉದಯವಾಹಿನಿ, ವಿಜಯಪುರ : ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ಸೇರಿದಂತೆ ಇಬ್ಬರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.ಜಿಲ್ಲಾ ವಕ್ಫ್ ಬೋರ್ಡ್ ಅಡಿಟರ್ ಮಹಮ್ಮದಮೊಹಸೀನ್ ಜಮಖಂಡಿ ಹಾಗೂ ಈತನ ಸಹೋದರ ಮುಜಾಹಿದ್ ಜಮಖಂಡಿ ಲಂಚ ಪಡೆಯುವ ವೇಳೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಲೋಕಾಯುಕ್ತರು ಬೀಸಿದ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಅಂಜುಮನ್ ಇಸ್ಲಾಂ ಕಮಿಟಿ ನೋಂದಣಿ ನವೀಕರಣಕ್ಕಾಗಿ ಜಿಲ್ಲಾ ವಕ್ಫ್ ಬೋರ್ಡ್ ಅಡಿಟರ್ ಮಹಮ್ಮದಮೊಹಸೀನ್ ಜಮಖಂಡಿ ಒಂದೂವರೆ ಲಕ್ಷ ಹಣದ ಬೇಡಿಕೆ ಇಟ್ಟಿದ್ದ. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಒಂದೂವರೆ ಲಕ್ಷ ಲಂಚದ ಹಣ ಪಡೆಯುತ್ತಿರುವಾಗ ಲೋಕಾಯುಕ್ಲ ಪೊಲೀಸರು ದಾಳಿ ನಡೆಸಿ ಜಿಲ್ಲಾ ವಕ್ಫ್ ಬೋರ್ಡ್ ಅಡಿಟರ್ ಮಹಮ್ಮದಮೊಹಸೀನ್ ಜಮಖಂಡಿ ಹಾಗೂ ಈತನ ಸಹೋದರ ಮುಜಾಹಿದ್ ಜಮಖಂಡಿ ಎಂಬುವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.
ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ, ಪೊಲೀಸ್ ಇನ್ಸಪೆಕ್ಟರ್‌ಗಳಾದ ಆನಂದ ಟಕ್ಕಣ್ಣವರ, ಆನಂದ ಡೋಣಿ ಹಾಗೂ ಲೋಕಾಯುಕ್ತ ಪೊಲೀಸ್ ಠಾಣೆ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.
