ಉದಯವಾಹಿನಿ ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ನೀರಿನ ಮಟ್ಟ ದಿನೇ ದಿನೇ ಇಳಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿಗಂದೂರು ಲಾಂಚ್ ನಲ್ಲಿ ಜೂನ್.14ರಿಂದ ಕಾರು, ಬಸ್ ಸೇರಿದಂತೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿಲ್ಲಿಸಲಾಗುತ್ತಿದೆ.ಈ ಬಗ್ಗೆ ಮಾಹಿತಿ ನೀಡಿರುವಂತ ಕಡವು ಅಧಿಕಾರಿಗಳು, ಅಂಬರಗೋಡ್ಲು-ಕಳಸವಳ್ಳಿಯ ಎರಡು ಬದಿಯಲ್ಲಿ ಪ್ಲಾಟ್ ಫಾರಂ ನದಿಯ ನೀದಿನಿಂದ ದೂರವಾಗಿದೆ. ವಾಹನಗಳನ್ನು ಲಾಂಚ್ ಮೂಲಕ ಕೊಂಡೊಯ್ಯಲು, ಇಳಿಸಿದ ಬಳಿಕ ತೆರಳಲು ಕೆಸರಿನಲ್ಲಿ ಸಿಲುಕುವ ಸಾಧ್ಯತೆ ಇದೆ. ಹೀಗಾಗಿ ಜನರನ್ನು ಮಾತ್ರ ಲಾಂಚ್ ನಲ್ಲಿ ಶರಾವತಿ ಹಿನ್ನೀರಿನಲ್ಲಿ ಕರೆದೊಯ್ಯಲು ಅವಕಾಶ ನೀಡಲಾಗುತ್ತಿದೆ ಎಂದರು.ಶರಾವತಿ ನದಿ ಹಿನ್ನೀರಿನಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವ ಕಾರಣ, ಜೂನ್.14ರಿಂದ ಸ್ಥಳೀಯರು ಮತ್ತು ಪ್ರವಾಸಿಗರನ್ನು ಮಾತ್ರ ಲಾಂಚ್ ನಲ್ಲಿ ಕರೆದೊಯ್ಯಲು ತೀರ್ಮಾನಿಸಲಾಗಿದೆ. ಮುಂಗಾರು ಮಳೆ ಆರಂಭಗೊಂಡು, ನೀರಿನ ಮಟ್ಟ ಏರಿಕೆಯಾದಾಗ ವಾಹನಗಳನ್ನು ಲಾಂಚ್ ನಲ್ಲಿ ಕರೆದೊಯ್ಯುವ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಹೇಳಿದರು.ಅಂದಹಾಗೇ ಶರಾವತಿ ನದಿ ನೀರಿನ ಮಟ್ಟ ಇಳಿಕೆಯಾಗುತ್ತಿರುವುದರಿಂದ ಸಿಂಗದೂರು ದೇವಸ್ಥಾನಕ್ಕೆ ತೆರಳು ಇರುವಂತ ಲಾಂಚ್ ವ್ಯವಸ್ಥೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಮುಂಗಾರು ಮಳೆ ಚುರುಕುಗೊಂಡು, ನೀರಿನ ಮಟ್ಟ ಹೆಚ್ಚಾದರೆ ಮಾತ್ರ ಲಾಂಚ್ ಸೇವೆ ಮುಂದುವರೆಯಲಿದೆ. ಇಲ್ಲವಾದಲ್ಲಿ ಈಗ ವಾಹನಗಳನ್ನು ಲಾಂಚ್ ನಲ್ಲಿ ಕೊಂಡೊಯ್ಯುವುದನ್ನು ಸ್ಥಗಿತಗೊಂಡಂತೆ, ಇಡೀ ಲಾಂಚ್ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!