ಉದಯವಾಹಿನಿ, ನವದೆಹಲಿ: ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ಇಂಡಿಯಾ ಗಾಟ್ ಟ್ಯಾಲೆಂಟ್ ಶೋನದಲ್ಲಿ ಅಶ್ಲೀಲ ಪದ ಬಳಸಿ ಬಂಧನದ ಭೀತಿ ಎದುರಿಸುತ್ತಿದ್ದ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾಗೆ ಸುಪ್ರೀಂಕೋರ್ಟ್ ಹಿಗ್ಗಾಮುಗ್ಗಾ ಝಾಡಿಸಿದ್ದು, ನಿಮ್ಮ ಕೊಳಕು ಬುದ್ದಿಯನ್ನು ದೇಶದ ಜನತೆಗೆ ತೋರಿಸಲು ಹೊರಟಿದ್ದೀರಾ ಎಂದು ಪ್ರಶ್ನಿಸಿದೆ.
ರಣವೀರ್ ಅಲಹಾಬಾದಿಯಾರ ವಕೀಲರ ವಾದ ಆಲಿಸಿದ ಸುಪ್ರೀಂಕೋರ್ಟ್, ರಣೇರ್ ಅನ್ನು ಬಂಧಿಸದಿರುವಂತೆ ಸೂಚಿಸಿದೆ. ಆದರೆ ರಣವೀರ್ ಪೊಲೀಸರ ತನಿಖೆಗೆ ಸೂಕ್ತವಾಗಿ ಸಹಕರಿಸಿದರೆ ಮಾತ್ರವೇ ಅವರನ್ನು ಬಂಧಿಸುವಂತಿಲ್ಲ, ಅಸ್ಸಾಂ, ಮುಂಬೈ ಪೊಲೀಸರು ರಣವೀರ್ನನನ್ನು ಬಂಧಿಸುವಂತಿಲ್ಲ ಎಂದಿರುವ ಸುಪ್ರೀಂ ನ್ಯಾಯಮೂರ್ತಿಗಳು, ಒಂದೊಮ್ಮೆ ಇದೇ ವಿಷಯದ ಮೇಲೆ ಇನ್ನೊಂದು ಪ್ರಕರಣ ದಾಖಲಾದರೂ ಸಹ ರಣವೀರ್ ಅನ್ನು ಬಂಧಿಸುವಂತಿಲ್ಲ ಎಂದಿದೆ.
ಅವನ(ರಣವೀರ್) ಮನಸ್ಸಿನಲ್ಲಿ ಏನೋ ಕೊಳಕು ಇದ್ದಿರಬಹುದು. ಅದಕ್ಕಾಗಿಯೇ ಅದನ್ನು ಯೂಟ್ಯೂಬ್‌ನಲ್ಲಿ ವಾಂತಿ ಮಾಡಿದ್ದಾನೆ. ನಿಮ್ಮ ತಂದೆತಾಯಿಗಳಿಗೆ ನೀವು ಇದೇ ಭಾಷೆಯನ್ನು ಬಳಸುತ್ತೀರ ಎಂದು ಆರೋಪಿಗಳ ಪರ ವಕೀಲರನ್ನು ಸುಪ್ರೀಂಕೋರ್ಟ್ ಖಾರವಾಗಿಯೇ ಪ್ರಶ್ನಿಸಿತು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೋಟೇಶ್ವರ್ ಸಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ರಣವೀರ್ ಅಲಹಾಬಾದಿಯಾ ವಿರುದ್ಧ ದಾಖಲಾಗಿರುವ ಹಲವು ಪ್ರಕರಣಗಳ ಬಂಧನ ತಡೆಕೋರಿ ಅರ್ಜಿಯನ್ನು ಕೈಗೆತ್ತಿಕೊಂಡು, ಇದು ನಾಚಿಕೆಗೇಡಿನ ಸಂಗತಿ. ನಿಜಕ್ಕೂ ಇಂಥ ಕೊಳಕು ಮನಸ್ಸು ಇಟ್ಟುಕೊಂಡಿರುವವರ ಹೇಳಿಕೆ ಖಂಡನೀಯ. ನೀವು ನಿಮ್ಮ ಪೋಷಕರಿಗೆ ಮಾತ್ರ ಅವಮಾನಿಸಿಲ್ಲ. ದೇಶದ ಎಲ್ಲಾ ಪೋಷಕರನ್ನು ಅವಮಾನಿಸಿದ್ದೀರ ಎಂದು ತರಾಟೆಗೆ ತೆಗೆದುಕೊಂಡಿತು.
