ಉದಯವಾಹಿನಿ, ಕಾಸರಗೋಡು: ಉತ್ತಮ ರಾಜಕೀಯ ಇತಿಹಾಸವಿರುವ ಕಮ್ಯುನಿಸ್ಟರು ಕೇರಳದಲ್ಲಿ ಹೀನ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಅವರಿಂದಾಗಿ ಇಲ್ಲಿನ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಇದರಿಂದಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಇಲ್ಲಿನ ಪೆರಿಯದ ಕಲೋತನಲ್ಲಿ ರಾಜಕೀಯ ವಿರೋಧಿಗಳಿಂದ ಕೊಲೆಯಾದ ಶರತ್‌ಲಾಲ್ ಮತ್ತು ಕೃಪೇಶ್‌ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದ ಅವರು ಸಿಪಿಐ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿರುವುದರಿಂದ ಜನರು ತೊಂದರೆಗೆ ಒಳಗಾಗಿದ್ದಾರೆ ಎಂದರು.
ಈಗ ಆಡಳಿತದಲ್ಲಿರುವ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಜನರು ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಕುಕೃತ್ಯಗಳು ಇರುವುದಿಲ್ಲ ಎಂದು ಶಿವಕುಮಾರ್ ನುಡಿದರು.

ಕೃಪೇಶ್ ಮತ್ತು ಶರತ್ ಲಾಲ್ ಅವರನ್ನು ಕಮ್ಯುನಿಸ್ಟ್ ಪಕ್ಷದವರು ಕೊಲೆ ಮಾಡಿದ್ದರು ಎಂದು ನಂಬಲು ಸಾಧ್ಯವಾಗಿರಲಿಲ್ಲ. ಆ ಪಕ್ಷ ಇಂಥ ಹೀನ ಕೃತ್ಯದಲ್ಲಿ ಭಾಗಿಯಾದದ್ದು ಬೇಸರದ ಸಂಗತಿ. ಇದು ಭಾರತದ ಪ್ರಜಾತಂತ್ರಕ್ಕೆ ಬಿದ್ದ ಪೆಟ್ಟು. ಎಲ್ಲರೂ ಒಂದು ಎಂದು ಪರಿಗಣಿಸುವ ಭಾರತದ ಸಂಸ್ಕೃತಿಗೂ ಆ ಪಕ್ಷ ಧಕ್ಕೆ ಉಂಟುಮಾಡಿದೆ ಎಂದ ಶಿವಕುಮಾರ್ ‘ಬಲಿಯಾದ ಯುವಕರ ಪಾಲಕರು ಮತ್ತು ಸ್ನೇಹಿತರ ಜೊತೆ ಪಕ್ಷ ಇದೆ ಎಂದರು. ಈಗ ಆಡಳಿತದಲ್ಲಿರುವ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಜನರು ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಕುಕೃತ್ಯಗಳು ಇರುವುದಿಲ್ಲ ಎಂದು ಶಿವಕುಮಾ‌ರ್ ನುಡಿದರು. ಕೃಪೇಶ್ ಮತ್ತು ಶರತ್ ಲಾಲ್ ಅವರನ್ನು ಕಮ್ಯುನಿಸ್ಟ್ ಪಕ್ಷದವರು ಕೊಲೆ ಮಾಡಿದ್ದರು ಎಂದು ನಂಬಲು ಸಾಧ್ಯವಾಗಿರಲಿಲ್ಲ. ಆ ಪಕ್ಷ ಇಂಥ ಹೀನ ಕೃತ್ಯದಲ್ಲಿ ಭಾಗಿಯಾದದ್ದು ಬೇಸರದ ಸಂಗತಿ. ಇದು ಭಾರತದ ಪ್ರಜಾತಂತ್ರಕ್ಕೆ ಬಿದ್ದ ಪೆಟ್ಟು ಎಲ್ಲರೂ ಒಂದು ಎಂದು ಪರಿಗಣಿಸುವ ಭಾರತದ ಸಂಸ್ಕೃತಿಗೂ ಆ ಪಕ್ಷ ಧಕ್ಕೆ ಉಂಟುಮಾಡಿದೆ ಎಂದ ಶಿವಕುಮಾ‌ರ್ ‘ಬಲಿಯಾದ ಯುವಕರ ಪಾಲಕರು ಮತ್ತು ಸ್ನೇಹಿತರ ಜೊತೆ ಪಕ್ಷ ಇದೆ ಎಂದರು.

Leave a Reply

Your email address will not be published. Required fields are marked *

error: Content is protected !!