ಉದಯವಾಹಿನಿ, ಬೆಂಗಳೂರು: ನಗರದ ಕೆಲ ರಸ್ತೆಗಳಲ್ಲಿ ಲಾಂಗ್ ಹಿಡಿದು ಬೈಕ್ ಗಳಲ್ಲಿ ಅಪಾಯಕಾರಿ ವ್ಹೀಲಿಂಗ್ ನಡೆಸುತ್ತಿರುವ ಪುಂಡರ ಬಂಧನಕ್ಕೆ ಪೊಲೀಸರು ತೀವ್ರ ಶೋಧ ಕೈಗೊಂಡಿದ್ದಾರೆ.
ರಾಮಮೂರ್ತಿನಗರ, ಕೆ.ಆರ್.ಪುರಂ ಫ್ಲೈ ಓವರ್ ಮಾರ್ಗವಾಗಿ ಸಿನಿಮೀಯ ರೀತಿಯಲ್ಲಿ ಸಾಲು ಸಾಲಾಗಿ ಬೈಕ್‌ಗಳಲ್ಲಿ ಲಾಂಗ್ ಹಿಡಿದು, ವಾಹನ ಸವಾರರಿಗೆ ಭಯ ಬೀಳಿಸುತ್ತಿದ್ದಾರೆ. ಪೊಲೀಸರ ಭಯವೇ ಇಲ್ಲದೇ ಹತ್ತಾರು ಮಂದಿ ಪುಂಡರು ಲಾಂಗ್ ಹಿಡಿದುಕೊಂಡು ರಾಜಾರೋಷವಾಗಿ ಬೈಕ್ ಚಲಾಯಿಸುತ್ತಿದ್ದಾರೆ.
ಪುಂಡರ ಗುಂಪೊಂದು ಹವಾ ಮೆಂಟೇನ್ ಮಾಡುವುದಕ್ಕೆ ಭಯಬೀಳಿಸುವಂತೆ ಕೈಯಲ್ಲಿ ಕತ್ತಿ, ಲಾಂಗು, ಡ್ರ್ಯಾಗರ್ ಹಿಡಿದು ಅಟ್ಟಹಾಸ ಮೆರೆಯುತ್ತಿದ್ದಾರೆ. ರಸ್ತೆಯಲ್ಲಿ ಬೆಂಕಿ ಬರುವಂತೆ ಕತ್ತಿ ಹಾಗೂ ಲಾಂಗ್‌ನಿಂದ ಬೀಸುತ್ತಿದ್ದು, ಪುಂಡರ ಹಾವಳಿಗೆ ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ.

Leave a Reply

Your email address will not be published. Required fields are marked *

error: Content is protected !!