ಉದಯವಾಹಿನಿ, ಸಿಂಧನೂರು. ವಿರುಪಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ಸುಮಾರು ಒಂದು ತಿಂಗಳಿಂದ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ ಎಂದು ದಿ 13ರಂದು ಉದಯ ವಾಹಿನಿ ದಿನ ಪತ್ರಿಕೆ

 ವರದಿ ಮಾಡಿತ್ತು ಅವತ್ತೇ ಕೆಡಿಪಿ ಸಭೆಯಲ್ಲಿ ಶಾಸಕರು ಕೆಲವು ಪಿಡಿಓ ಗಳಿಗೆ ತರಾಟೆ ತೆಗೆದುಕೊಂಡರು ಆಗ ಎಚ್ಚೆತ್ತುಕೊಂಡ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ದೇವಿ ಅವರು ಹಾಗೂ ಶಿವಯ್ಯ ಜಿಡಿಪಿ ಹಾಗು ಪಿಡಿಓ ಸೆಕ್ರೆಟರಿ ಅಕೌಂಟೆಂಟ್ ಗ್ರಾಮಕ್ಕೆ ಭೇಟಿ ಮಾಡಿ ಲಕ್ಷ್ಮಿ ಮೇಡಂ ಕೆರೆಯನ್ನು ವಿಕ್ಷೆಣೆ ಮಾಡಿ ಸ್ವಚ್ಛಗೊಳಿಸಿ ಏಳು ದಿನಗಳ ಒಳಗಾಗಿ ಕೆರೆಗೆ ನೀರು ಹರಿಸಿ ಬೇಕು ಪಿಡಿಓ ಗೂ ಹಾಗೂ ಸಾರ್ವಜನಿಕರು ಸಲಹೆ ನೀಡಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ದೇವಿ ತರಾಟೆ ತೆಗೆದುಕೊಂಡರು.ಸ್ಥಳಕ್ಕೆ ಪಿಡಿಓಯನ್ನು ಕರೆದು ಅವರಿಗೆ ವಾರ್ನಿಂಗ್ ಕೊಟ್ಟರು ಮುಂದಿನ ದಿನದಲ್ಲಿ ಈ ತಪ್ಪು ಮಾಡಿದ್ದು ಏನಾದರೂ ವಿಷಯ ತಿಳಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಿಡಿಓ ಗೆ ವಾರ್ನಿಂಗ್ ನೀಡಿದರು. ನಂತರ ಸರಕಾರ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿಕೊಟ್ಟು ಸಮಸ್ಯೆಗಳು ಬಗ್ಗೆ ವಿಚಾರಿಸಿದರು ನೀರು ಸರಿಯಾಗಿ ಬರುತ್ತಿದೆ ಇಲ್ಲ ಎಂಬ ಶಿಕ್ಷಕರನ್ನು ವಿಚಾರಿಸಿದಾಗ ಮುಖ್ಯ ಶಿಕ್ಷಕರು ಇಲ್ಲವೆಂದು ಹೇಳಿದರು ಉತ್ತರ ನೀಡಿದರು ಇನ್ನು ಮುಂದೆ ನಿಮ್ಮ ಶಾಲೆಗೆ ಎರಡು ದಿಸಕ್ಕೂ ಒಮ್ಮೆ ನೀರಿನ ಟ್ಯಾಂಕಿನ ಮೂಲಕ ನಿಮಗೆ ತಲುಪಿಸುವಂತ ಆಶ್ವಾಸನೆ ಕೊಟ್ಟರು. ನಂತರ ಬೋರವೆಲ್ ಹತ್ತಿರ ಹೋಗಿ ನೋಡಿದರು ಆ ನೀರನ್ನು ಕುಡಿದು ಈ ನೀರನ್ನು ಬಳಕೆ ಮಾಡ್ಲಿಕ್ಕೆ ಬರುತ್ತೆ ಕುಡಿಲಿಕ್ಕೆ ಟ್ಯಾಂಕರ್ ಮುಖಾಂತರ ತರುತ್ತೇವೆ ಎಂದು ಸಾರ್ವಜನಿಕರಿಗೆ ಭರವಸೆ ಕೊಟ್ಟರು ಬರುವಾಗ ಗ್ರಾಮದ ಮಹಿಳೆಯರು ಕಾಲಿ ಕೊಡವನ್ನು ಇಟ್ಟುಕೊಂಡು ಮೇಡಮ್ಮುನ ಕಾರನ್ನು ಮುತ್ತಿಗೆ ಹಾಕಿದಾಗ ಅವರು ನಿಮ್ಮ ಸಮಸ್ಯೆಯನ್ನು ನನಗೆ ಗೊತ್ತಾಗಿದೆ. ನೀರಿನ ಸಮಸ್ಯೆಯನ್ನು ಅಂತಂತವಾಗಿ ಬಗೆಹರಿಸುತ್ತೇನೆಂದು ಸಾರ್ವಜನಕ ಮಹಿಳೆಯರಿಗೆ ಭರವಸೆ ನೀಡಿದರು ಈ ಸಂದರ್ಭದಲ್ಲಿ ‌ಗ್ರಾಮಸ್ಥರಾದ ಹೇಮರೆಡ್ಡಿ ಗೌಡ ಬಸವರಾಜ್ ದೊಡ್ಡಮನಿ ರಮೇಶ್ ಗೌಡ ಹಾಗೂ ಆರ್ ದುರ್ಗಪ್ಪ ದುರ್ಗಪ್ಪ ದೊಡ್ಡಮನಿ ಇನ್ನಿತರು ಸಾರ್ವಜನಿಕರು ಇದ್ದರು

Leave a Reply

Your email address will not be published. Required fields are marked *

error: Content is protected !!