ಉದಯವಾಹಿನಿ, ಬೆಂಗಳೂರು: ನಾರ್ಥ್ ಬೆಂಗಳೂರು ಎಜುಕೇಷನಲ್ ಟ್ರಸ್ಟ್ ಕಮ್ಮಗೊಂಡನಹಳ್ಳಿ ಬೆಂಗಳೂರು, ಅಬ್ಬಿಗೆರೆ ರೋಟರಿ ಕ್ಲಬ್, ಜನಪದ ಸಾಂಸ್ಕೃತಿಕ ಕಲಾ ಸಂಘ ಬೆ. ಗ್ರಾ(ರಿ) ಜಿಲ್ಲೆ ಹಾಗೂ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಜಾನಪದ ಕಲಾ ವೃಂದ (ರಿ) ಚಿಕ್ಕಬಳ್ಳಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಿದ ಎನ್‌ಬಿಇಟಿ ಕಲಾ ವೇದಿಕೆಯಲ್ಲಿ ಶಿವರಾತ್ರಿಯ ಮುನ್ನಾದಿನ ಜನಪದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಅಧ್ಯಕ್ಷರಾದ ಆರ್.ಶಾಂತಕುಮಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಡಿ. ಎನ್. ಹರಿದಾಸ್ ಸಂಸ್ಥೆಯ ನಿರ್ದೇಶಕರುಗಳಾದ ಸರೋಜಿನಿ ಪ್ರಸಾದ್, ರಾಜೇಂದ್ರ , ನೀರಜಾಕ್ಷಿ, ಬಿ. ಎಸ್. ಲಕ್ಷ್ಮೀಶ, ಪ್ರಾಂಶುಪಾಲರು, ಜನಪದ ತಂಡದ ಮುಖ್ಯಸ್ಥರಾದ ರಾಮಚಂದ್ರ, ತಂಡದ ಕಲಾವಿದರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ವಿದ್ಯಾರ್ಥಿಗಳು, ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆಯ ಕಾರ್ಯಕ್ರಮದ ನಂತರ ಪೂರ್ಣ ಪ್ರಜ್ಞಾ ಅಕಾಡೆಮಿ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ನಡೆಸಿಕೊಟ್ಟರು. ನಂತರ ಜನಪದ ತಂಡದ ಕಲಾವಿದರು ಜನಪದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
