ಉದಯವಾಹಿನಿ,ಆಲೂರು: ತಾಲ್ಲೂಕಿನ ಜೆ. ತಿಮ್ಮನಹಳ್ಳಿ ಗ್ರಾಮದ ರೈತ ನಿಂಗಯ್ಯ ಎಂಬುವರ ತೋಟದಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿ ತಗುಲಿ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೂರು ವರ್ಷದ 35 ಅಡಿಕೆ ಗಿಡ, ನೀರು ಹಾಯಿಸುವ ಪೈಪ್‌ಗಳು ಸುಟ್ಟು ಕರಕಲಾಗಿವೆ.
ವಿಷಯ ತಿಳಿದ ಸ್ಥಳೀಯರು ಜೊತೆಗೂಡಿ ಕೊಳವೆ ಬಾವಿಯಿಂದ ನೀರು ಹೊತ್ತು ಹಾಕಿ ಬೆಂಕಿ ನಂದಿಸಿದ್ದಾರೆ.
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಪರಿಹಾರ ಕೊಡಿಸಬೇಕು ಎಂದು ನಿಂಗಯ್ಯ ಮನವಿ ಮಾಡಿದ್ದಾರೆ.
