ಉದಯವಾಹಿನಿ, ಔರಾದ್: ಮಹಾಶಿವರಾತ್ರಿ ಇಲ್ಲಿ ವಿಶಿಷ್ಟ ಹಾಗೂ ವೈವಿದ್ಯಮಯವಾಗಿ ಆಚರಿಸಲಾಗುತ್ತದೆ. ಇಲ್ಲಿಯ ಅಮರೇಶ್ವರ ದೇವಸ್ಥಾನ ಬಹಳ ಪುರಾತನ ಹಾಗೂ ವಿಶಿಷ್ಟ ಕಲೆಯಿಂದ ಕೂಡಿದೆ.ಪ್ರತಿ ವರ್ಷ ಮಹಾಶಿವರಾತ್ರಿ ವೇಳೆ ಇಲ್ಲಿ ಜಾತ್ರಾ ಉತ್ಸವ ನಡೆಯುತ್ತದೆ. ಈ ದೇವಸ್ಥಾನದ ಗರ್ಭ ಗುಡಿಯಲ್ಲಿರುವ ಲಿಂಗ ಸಹಸ್ರಾರು ಭಕ್ತರನ್ನು ಆಕರ್ಷಿಸಿದೆ.ಈ ಕಾರಣಕ್ಕೆ ಶಿವರಾತ್ರಿ ವೇಳೆ ದೂರ ದೂರದ ಭಕ್ತರು ಲಿಂಗ ದರ್ಶನ ಪಡೆಯುವುದನ್ನು ರೂಢಿಸಿಕೊಂಡಿದ್ದಾರೆ.ಈ ಲಿಂಗ ಹೊರ ಜಗತ್ತಿಗೆ ಗೊತ್ತಾಗಿದ್ದು ತುಂಬಾ ರೋಚಕತೆಯಿಂದ ಕೂಡಿದೆ. ಪಟ್ಟಣಕ್ಕೆ ಸಮೀಪ ಯನಗುಂದಾ ಎಂಬ ಗ್ರಾಮವೊಂದಿದೆ.ಅಲ್ಲಿಯ ಆಕಳುಗಳು ಪ್ರತಿದಿನ ಮೇಯಲು ಕಾಡಿಗೆ ಹೋಗುತ್ತಿದ್ದವು. ಹೀಗಿರುವಾಗ ಒಂದು ಆಕಳು ಕಾಡಿನಿಂದ ಮನೆಗೆ ಬಂದಾಗ ಅದರ ಎಂದಿನಂತೆ ಕಾಡಿನೊಳಗೆ ಹೋಗಿ ಅಲ್ಲಿಯ ಹುತ್ತಿನ ಮೇಲೆ ನಿಂತಾಗ ಹಾಲು ರಂಧ್ರದ ಮೂಲಕ ಒಳಗೆ ಹೋಗುತ್ತಿತ್ತು. ಚಕಿತನಾದ ರೈತ
ಬೀದರ್ ಕೆಚ್ಚಲಿನ ಹಾಲು ಖಾಲಿಯಾಗುತ್ತಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ರೈತ ಒಂದು ದಿನ ಆಕಳ ಹಿಂದೆ ಕಾಡಿನೊಳಗೆ ಹೋದ. ಆ ಆಕಳು
ಒಳಗೇನಿದೆ ಎಂದು ನೋಡಲು ಹುತ್ತ ಅಗೆಯಲು ಆರಂಭಿಸಿದಾಗ ಲಿಂಗ ಪತ್ತೆಯಾಗಿದೆ. ಹೀಗಾಗಿ ಈ ಲಿಂಗಕ್ಕೆ ಇಂದಿಗೂ ‘ಉದ್ಭವಲಿಂಗ’ ಎಂದು ಕರೆಯಲಾಗುತ್ತದೆ ಎಂದು ಇಲ್ಲಿಯ ಹಿರಿಯರು ಹೇಳುತ್ತಾರೆ.
ಜಾತ್ರೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿತ್ತು. ದೇಶದ ವೈವಿದ್ಯ ತಳಿಯ ಜಾನುವಾರುಗಳ ಮೇಳ ಇಲ್ಲಿ ನಡೆಯುತ್ತಿತ್ತು.
ದೇಶದ ವಿವಿಧೆಡೆಯ ಒಂಟೆಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದವು ಈ ಕಾರಣ ಈ ಜಾತ್ರೆ ರಾಜ್ಯದ ಏಕೈಕ ಒಂಟಿ ಜಾತ್ರೆ ಎಂಬ ಖ್ಯಾತಿಯೂ ಪಡೆದಿತ್ತು, ಆದರೆ ಕ್ರಮೇಣವಾಗಿ ಒಂಟೆ ಸಂತತಿ ಕಡಿಮೆಯಾಗಿ ಅವುಗಳು ಬರುವುದು ನಿಂತು ಹೋಗಿದೆ ಎನ್ನುತ್ತಾರೆ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಬಸವರಾಜ ದೇಶಮುಖ,ಇಲ್ಲಿ ಈಗಲೂ ಜಾನುವಾರುಗಳಿಗಾಗಿ ಗೋಶಾಲೆ ಮತ್ತು ಭಕ್ತರಿಗಾಗಿ ದಾಸೋಹ ವ್ಯವಸ್ಥೆ ಇದೆ ಅಂತರರಾಜ್ಯ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗುತ್ತದೆ. ವಿವಿಧೆಡೆಯ ಕುಸ್ತಿ ಪಟುಗಳು ಇಲ್ಲಿಗೆ ಬರುತ್ತಾರೆ. ಕುಸ್ತಿ ಪ್ರೇಮಿಗಳಿಗೆ ಈ ಜಾತ್ರೆ ಹೇಳಿ ಮಾಡಿಸಿದಂತಿದೆ.ಔರಾದ್ ಅಮರೇಶ್ವರ ದೇವಸ್ಥಾನದಲ್ಲಿ ಶಾಸಕ ಪ್ರಭು ಚವಾಣ್ ಭಕ್ತರಿಗೆ ಪ್ರಸಾದ ವಿತರಿಸಿದರು. ಶಿವರಾತ್ರಿ ವಿಶೇಷ ಪೂಜೆ ಪ್ರಾರ್ಥನೆ ಜಾತ್ರೆ ಹಾಗೂ ಮಹಾ ಶಿವರಾತ್ರಿ ಅಂಗವಾಗಿ ಇಲ್ಲಿಯ ಅಮರೇಶ್ವರ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ಪ್ರಾರ್ಥನೆ ನಡೆದವು. ದೇವಸ್ಥಾನಕ್ಕೆ ಬೆಳಿಗ್ಗೆಯಿಂದಲೇ ಆಗಮಿಸಿದ ಭಕ್ತರು ಉದ್ಭವಲಿಂಗ ಅಮರೇಶ್ವರನಿಗೆ ಪೂಜೆ ಸಲ್ಲಿಸಿದರು. ಕೆಲವರು ಶಲ್ಯ ತೊಡಿಸಿ ಕಾಯಿ ಒಡೆದು ತಮ್ಮ ಇಷ್ಟಾರ್ಥ ಪೂರೈಸಿದರು. ಇಡೀ ದೇವಸ್ಥಾನದಲ್ಲಿ ಒಂ ಭಲಾ ಶಂಕರ ಭಲಾ ಎಂಬ ಘೋಷಣೆ ಮೊಳಗಿತು.
