ಉದಯವಾಹಿನಿ, ಚಿಕ್ಕಬಳ್ಳಾಪುರ: ತಾಲೂಕಿನ ಸುಪ್ರಸಿದ್ಧ ನಂದಿ ಗ್ರಾಮದ ದಕ್ಷಿಣ ಕಾಶಿ ಶ್ರೀ ಭೋಗನಂದೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಮರುದಿನ ಇಂದು ಅದ್ದೂರಿಯಾಗಿ ಜೋಡಿ ಬ್ರಹ್ಮ ರಥೋತ್ಸವಗಳು ನಡೆದಿದ್ದು ಸಾವಿರಾರು ಭಕ್ತಾದಿಗಳು ಈ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಭಾವ ಮೆರೆದವರು.
ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಎಂ. ಸಿ.ಸುಧಾಕರ್ ಹಾಗೂ ಶಾಸಕ ಪ್ರದೀಪ್ ಈಶ್ವರ್ ರವರುಗಳು ಜೋಡಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆಯೇ ಸಾವಿರಾರು ಭಕ್ತಾದಿಗಳು ಏಕಕಾಲದಲ್ಲಿ ಶ್ರೀ ಬೊಗ ನಂದೀಶ್ವರ ಸ್ವಾಮಿಗೆ ಜಯಗೋಷ ಮಾಡಿದ್ದು ವಿಶೇಷವೇನಿತು.
ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಮಾಜಿ ನಂದಿ ಜಿಲ್ಲಾ ಪಂಚಾಯತ್ ಸದಸ್ಯ ವಕೀಲ ಕೆಂ. ಎಂ. ಮುನೇಗೌಡ ಅವರೊಟ್ಟಿಗೆ ವಿವಿಧ ರಾಜಕೀಯ ಪಕ್ಷಗಳ ಗಣ್ಯರುಗಳು ಹಾಗೂ ಜಿಲ್ಲಾಡಳಿತದ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ನಂದಿ ಗ್ರಾಮ ಪಂಚಾಯತ್ ಅಧ್ಯಕ್ಷರು ಒಳಗೊಂಡಂತೆ ಅನೇಕ ಮಂದಿ ಮುಖಂಡರುಗಳು ಈ ಜೋಡಿ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡಿದ್ದು ಹೆಚ್ಚಿನ ಮೆರುಗು ತಂದಿತು.
ಪ್ರತಿ ವರ್ಷ ತಾಲೂಕಿನ ನಂದಿ ಗ್ರಾಮದ ದಕ್ಷಿಣ ಕಾಶಿ ಶ್ರೀ ಭೋಗ ನಂದೀಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಚತುರುದ್ರ ಅಭಿಷೇಕ ಹಾಗೂ ಜಾಗರಣೆಯ ಪ್ರಯುಕ್ತ ನಾಲ್ಕು ಯಾ ಮಗಳ ವಿಶೇಷ ಪೂಜೆ ಮರುದಿನ ಅಮಾವಾಸ್ಯೆ ಎಂದು ಸುಮಾರು ಎರಡುವರೆ ಕೋಟಿ ರೂಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಬ್ರಹ್ಮ ರಥದಲ್ಲಿ ಶ್ರೀ ಭಗನಂದೀಶ್ವರ ಸ್ವಾಮಿ ಅತ್ಯಂತ ಆಕರ್ಷಣೆಗಾಗಿ ಕಟ್ಟಿರುವ ಮತ್ತೊಂದು ಬ್ರಹ್ಮರಥದಲ್ಲಿ ಗಿರಿಜಾ ಮತ್ತು ಗಣಪತಿ ದೇವರುಗಳ ಜೋಡಿ ರಥೋತ್ಸವ ನಡೆದಿದ್ದು ಸುಮಾರು ೪೦ ಸಾವಿರಕ್ಕೂ ಅಧಿಕ ಮಂದಿ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
