ಉದಯವಾಹಿನಿ, ಅರಸೀಕೆರೆ: ನಗರದ ಹಾಸನ ರಸ್ತೆ 2ನೇ ಕ್ರಾಸ್‌ನಲ್ಲಿನ ಅಂಗಾಳಪರಮೇಶ್ವರಿ ದೇವಿ ಕರಗ ಮಹೋತ್ಸವವು ಫೆ.28ರಂದು ನಡೆಯಲಿದೆ. ಅಂಗಾಳಪರಮೇಶ್ವರಿ ದೇವಿ ಕರಗ ಮಹೋತ್ಸವದ ಪ್ರಯುಕ್ತ ಅಮ್ಮನವರಿಗೆ ಅಭಿಷೇಕ, ಧ್ವಜಾರೋಹಣ, ಹೋಮ, ಅಷ್ಟದಿಕ್ಕು ಬಲಿಪೂಜೆ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಗ್ರಾಮದೇವತೆ ಕರಿಯಮ್ಮ ದೇವಿ ಮತ್ತು ಮಲ್ಲಿಗೆಮ್ಮ ದೇವಿ ಮೆರವಣಿಗೆ ಏರ್ಪಡಿಸಲಾಗಿದ್ದು ಮಾಲಾಧಾರಿಗಳಿಂದ ಕಂಕಣ ಕಟ್ಟುವ ಕಾರ್ಯಕ್ರಮ ನಡೆಯಲಿದೆ.
ಅಂದು ಸುಬ್ರಹ್ಮಣ್ಯ ಸ್ವಾಮಿ ಬೆಟ್ಟದಿಂದ ಕರಗ ಅಲಂಕರಿಸಿ ನಾದಸ್ವರದೊಂದಿಗೆ ರಾಜಬೀದಿಗಳಲ್ಲಿ ಮೆರವಣಿಗೆ, ಸಂಜೆ 7 ಗಂಟೆಗೆ ಮಾಲೆ ಧರಿಸುವ ಭಕ್ತರಿಂದ ಅಗ್ನಿಕುಂಡ ಹೊತ್ತು ಸಾಗಲಿದೆ. ಬಳಿಕ ಅಮ್ಮನವರಿಗೆ ಕುಂಭಪೂಜೆ ಜರುಗಲಿದೆ. ಮಾರ್ಚ್ 1ರಂದು ದೇವರಿಗೆ ವಿಶೇಷ ಪೂಜೆ, ಪ್ರಸಾದ ವಿನಿಯೋಗ 2ರಂದು ವಿಶೇಷ ಅಲಂಕಾರ. ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್ ಎಂದು ದೇವಸ್ಥಾನದ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
