ಉದಯವಾಹಿನಿ, ಹುಬ್ಬಳ್ಳಿ : ‘ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ತತ್ತ್ವ, ಸಿದ್ಧಾಂತದ ವಿರುದ್ಧವಾಗಿದ್ದರೆ, ಅವರನ್ನು ಪಕ್ಷದಿಂದ ಹೊರಗೆ ಹಾಕಲಿ’ ಎಂದು ಸಂಸದ ಜಗದೀಶ ಶೆಟ್ಟರ್ ಸವಾಲು ಹಾಕಿದರು.
‘ಡಿ.ಕೆ.ಶಿವಕುಮಾರ್ ಅವರು ಮಹಾಕುಂಭಮೇಳ, ಈಶ ಯೋಗ ಕೇಂದ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ದೊಡ್ಡಸ್ತಿಕ ಅಲ್ಲ.
ಇದು ಸರಿ ಇರದಿದ್ದರೆ, ಅವರನ್ನು ಪಕ್ಷದಿಂದ ಉಚ್ಚಾಟಿಸಲಿ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
‘ಹಿಂದೂಗಳ ಮೇಲೆ ದ್ವೇಷ ಇರುವ ಕಾರಣಕ್ಕೆ ಕಾಂಗ್ರೆಸ್ ಉದ್ಘಾರ ಆಗಿಲ್ಲ.
ಹಿಂದೂಗಳಿಲ್ಲದೆ ಕಾಂಗ್ರೆಸ್ ರಾಜಕಾರಣ ಮಾಡುವುದು, ಅದರ ಹಣೆಬರಹ. ಹಿಂದೂಗಳನ್ನು ಕೀಳಾಗಿ ಕಾಣುವುದೇ ಕಾಂಗ್ರೆಸ್ ಅವನತಿಗೆ ಕಾರಣ’ ಎಂದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹಿಂದೂ ವಿರೋಧಿ ಆಗಿದೆ. ಭಾರತವು ಹಿಂದೂಗಳ
ದೇಶವಾಗಿದ್ದು, ಹಿಂದೂ ರಾಷ್ಟ್ರ ಎಂಬ ಪರಂಪರೆ ಇದೆ. ಇದಕ್ಕೆ ಅಡ್ಡಿ ಆಗಬಾರದು. ಕಮ್ಯುನಿಸ್ಟರು ಸಹ ಹಿಂದೂ ದೇವಾಲಯಕ್ಕೆ ಹೋಗಿದ್ದಾರೆ.
ಅಲ್ಲದೆ, ಕಾಂಗ್ರೆಸ್‌ನ ಸಾಕಷ್ಟು ನಾಯಕರು ಕೂಡ ಕುಂಭಮೇಳದಲ್ಲಿ ಭಾಗವಹಿಸಿದ್ದಾರೆ. ರಾಜಕಾರಣ ಮತ್ತು ಧರ್ಮಕ್ಕೆ ಯಾವುದೇ ಕಾರಣಕ್ಕೂ ತಳಕು ಹಾಕಬಾರದು’ ಎಂದರು.
