ಉದಯವಾಹಿನಿ, ಬೆಂಗಳೂರು: ವಿಧಾನಸೌಧದದಲ್ಲಿ ಜಂಟಿ ಮತ್ತು ಆಯವ್ಯಯ ಅಧಿವೇಶನಗಳು ಮಾ.3 ರಿಂದ 21 ವರೆಗೆ ನಡೆಯಲಿದ್ದು, ಕಾರ್ಯಾಕಲಾಪಗಳಿಗೆ ಅಡಚಣೆ ಉಂಟಾಗದಂತೆ ವಿಧಾನಸೌಧ ಸುತ್ತ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ತಿಳಿಸಿದ್ದಾರೆ.
ಅಧಿವೇಶನದ ಕಲಾಪಗಳು ಸುಗಮಾವಾಗಿ ನಡೆಯುವ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಠಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರಬಾರದು, ಮೆರವಣಿಗೆ ಮತ್ತು ಸಭೆ ನಡೆಸಬಾರದು, ಮಾರಾಕಾಸ್ತ್ರಗಳನ್ನು ಒಯ್ಯಬಾರದು, ಸ್ಫೋಟಕ ವಸ್ತು ಸಿಡಿಸಬಾರದು, ಬಿತ್ತಿಪತ್ರ ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!