ಉದಯವಾಹಿನಿ, ಗುಜರಾತ್: ಬಾಲಕಿಯ ಕನಸಿನಲ್ಲಿ ಶಿವ ಕಾಣಿಸಿಕೊಂಡಿದ್ದ ಎಂಬ ಕಾರಣಕ್ಕೆ ದೇವಾಲಯದಿಂದ ಶಿವನ ವಿಗ್ರಹವನ್ನು ಕದ್ದು ತಮ್ಮ ಮನೆಯಲ್ಲಿ ಶಿವನ ಪ್ರತಿಷ್ಠಾಪನೆ ಮಾಡಿಕೊಂಡಿದ್ದ ಕುಟುಂಬವೊಂದರ ಎಂಟು ಸದಸ್ಯರನ್ನು ಬಂಧಿಸಲಾಗಿದೆ.
ಮಹಾಶಿವರಾತ್ರಿಯ ಸಂದರ್ಭದಲ್ಲಿ ಗುಜರಾತ್‌ನ ದ್ವಾರಕಾದ ದೇವಸ್ಥಾನದಿಂದ ಶಿವಲಿಂಗವನ್ನು ಕದ್ದು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿದ ಆರೋಪದ ಮೇಲೆ ಕುಟುಂಬದ ಎಂಟು ಸದಸ್ಯರನ್ನು ಬಂಧಿಸಲಾಗಿದೆ. ಬಾಲಕಿಯೊಬ್ಬಳಿಗೆ ಶಿವಲಿಂಗದ ಕನಸು ಬಿದ್ದ ನಂತರ ಕುಟುಂಬದವರು ದ್ವಾರಕಾದಲ್ಲಿರುವ ಪ್ರಾಚೀನ ಭೀದ್ಧಂಜನ್ ಮಹಾದೇವ್ ದೇವಾಲಯದಿಂದ
ಶಿವಲಿಂಗವನ್ನು ಕದ್ದಿದ್ದರು.
ಅಧಿಕಾರಿಗಳು ಆರಂಭದಲ್ಲಿ ಅದನ್ನು ಸಮುದ್ರಕ್ಕೆ ಎಸೆದಿದ್ದಾರೆ ಎಂದು ಶಂಕಿಸಿದ್ದರು. ದ್ವಾರಕಾದಿಂದ 500 ಕಿಲೋಮೀಟರ್ ದೂರದಲ್ಲಿರುವ ಸಬರ್ಕಾಂತ ಜಿಲ್ಲೆಯ ಹಿಮ್ಮತ್‌ನಗರದ ಕುಟುಂಬವೊಂದು ಅದನ್ನು ಕದ್ದಿರುವುದು ಬಳಿಕ ತಿಳಿದುಬಂದಿತ್ತು. ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಕುಟುಂಬದ ಒಬ್ಬ ಹುಡುಗಿ ಕನಸಿನಲ್ಲಿ ಕಾಣಿಸಿಕೊಂಡ ಭೀದ್ದಂಜನ್ ಮಹಾದೇವ್ ದೇವಸ್ಥಾನದ ಶಿವಲಿಂಗವನ್ನುಮನೆಗೆ ತಂದು ಪ್ರತಿಷ್ಠಾಪಿಸುವುದರಿಂದ ಅವರ ಸಮಸ್ಯೆಗಳು ಕೊನೆಗೊಂಡು ಸಮೃದ್ಧಿ ತರುತ್ತದೆ ಎಂದು ನಂಬಿದ್ದರು ಎಂಬುದು ಪೊಲೀಸರಿಗೆ ಬಳಿಕ ಶಿವಲಿಂಗದಲ್ಲಿ ಕೆತ್ತನೆ ಮಾಡಿರುವ ಕಲ್ಲು ನಾಗರದ ತಲೆ ಮೇಲೆ ಬೆಳೆದ ಕೂದಲು; ಪವಾಡ ಕಣ್ಣುಂಬಿಕೊಳ್ಳಲು ಬಂದ ಜನಮಹೇಂದ್ರ ಮಕ್ಖಾನಾ ಅವರ ಸೊಸೆಯ ಕನಸಿನಲ್ಲಿ ಶಿವಲಿಂಗ ಕಾಣಿಸಿಕೊಂಡಿತ್ತು, ಕುಟುಂಬದ ಏಳರಿಂದ ಎಂಟು ಸದಸ್ಯರು ದ್ವಾರಕೆಗೆ ಪ್ರಯಾಣ ಬೆಳೆಸಿ ಕೆಲವು ದಿನಗಳ ಕಾಲ ಅಲ್ಲಿಯೇ ಇದ್ದರು.
