ಉದಯವಾಹಿನಿ ,ಕೆ.ಆರ್.ಪುರ : ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಉಚಿತ ಆಟೋಗಳನ್ನು ನೀಡಿರುವ ಶಿಶು ಮಂದಿರ ಸಂಸ್ಥೆಯ ಶ್ರೀ ಆನಂದ್ ರವರನ್ನು ಸನ್ಮಾನಿಸಿ, ಮಹಿಳಾ ಆಟೋ ಚಾಲಕರನ್ನು ವೇದಿಕೆಗೆ ಕರೆದು ಸೀರೆಗಳನ್ನು ಹಂಚಿ, ಸ್ವಾವಲಂಬನೆ ಜೀವನ ನಡೆಸಲು ಸಮಾಜದ ಅಬಲೆ ಸ್ತ್ರೀ ಯರಿಗೂ ಮಾದರಿಯಾಗುವ ನಿಟ್ಟಿನಲ್ಲಿ ಉತ್ತೇಜಿಸಲಾಯಿತು.
ಸಂಸ್ಥೆಯ ಶಾಶ್ವತ ಸೇವಾಕಾರ್ಯವಾಗಿ ಟೈಲರಿಂಗ್ ತರಬೇತಿ ನೀಡುತ್ತಿದ್ದು, ಫಲಾನುಭವಿಗಳಿಗೆ ಎಂಟು ಟೈಲರಿಂಗ್ ಮೆಷಿನ್ ಗಳನ್ನು ನೀಡಲಾಯಿತು.
ಪರಿಸರ ಕಾಳಜಿಯನ್ನು ಪ್ರಸರಿಸಲು ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡಲಾಯಿತು.

ಸುತ್ತಮುತ್ತಲಿನ ಸಮಾಜಸೇವಕರನ್ನು ಗುರುತಿಸಿ, ವಿವಿಧ ಕ್ಷೇತ್ರಗಳಲ್ಲಿ ಸಮಾಜಸೇವೆ ಸಲ್ಲಿಸುತ್ತಿರುವ ಸುಮಾರು ೨೩ ಜನರನ್ನು ಸನ್ಮಾನಿಸಿ, ಇನ್ನೂ ಸಮಾಜಸೇವೆಯನ್ನು ಮುಂದುವರೆಸಲು ಪ್ರೇರೇಪಿಸಲಾಯಿತು.
ಇದುವರೆಗೂ ೧೧೦ ಟೈಲರಿಂಗ್ ಮೆಷಿನ್ ಗಳನ್ನು ವಿತರಿಸಿರುವುದನ್ನು ಲಯನ್ಸ್ ಎನ್.ಎಸ್.ಸಿ.ಬೋಸ್ ಕ್ಲಬ್ ನ ೧೫ನೇ ವರ್ಷದ ವಾರ್ಷಿಕೋತ್ಸವವನ್ನು ಬಸವನಪುರದ ಲಯನ್ಸ್ ಭವನದಲ್ಲಿ ಉದ್ಘಾಟಿಸಿ, ಸಂಸ್ಥೆಯ ಕಾರ್ಯಗಳು ಶ್ಲಾಘನೀಯ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರು ತಿಳಿಸಿದರು.ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಅನನ್ಯವಾಗಿದ್ದು,ಮಹಿಳೆಯರ ಏಳಿಗೆಗೆ ಶ್ರಮಿಸುತ್ತಿರುವ ಇಂತಹ ಸಂಘಟನೆಗಳ ಕಾರ್ಯ ಅರ್ಥಪೂರ್ಣ ಎಂದರು.
ಸಮಾಜದಲ್ಲಿ ಮಹಿಳೆಯರು ಸರಿಸಮಾನಾಗಿ ಪೈಪೋಟಿ ನೀಡುತ್ತಿದ್ದು,ಸಮಾನತೆಯ ನಿಟ್ಟಿನಲ್ಲಿ ಅವರಿಗೆ ಪ್ರೋತ್ಸಾಹ ಅಗತ್ಯವಿದೆ ಎಂದು ನುಡಿದರು.
ಲಯನ್ಸ್ ಎನ್.ಎಸ್.ಸಿ.ಬೋಸ್ ಕ್ಲಬ್ ಅಧ್ಯಕ್ಷ ಅರಳಪ್ಪ ಅವರು ಮಾತನಾಡಿ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಹಲವು ಯೋಜನೆಗಳನ್ನು ರೂಪಿಸಿದ್ದು, ಸಮಾಜದ ಬೆಳವಣಿಗೆಗೆ ನಮ್ಮ ಕಾರ್ಯ ಮುಂದುವರೆಯಲಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!