ಉದಯವಾಹಿನಿ, ಬೆಂಗಳೂರು :  ಫಿಲ್ಮ್ ಫೆಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕನ್ನಡ ಚಿತ್ರರಂಗದ ಕೆಲ ನಟ-ನಟಿಯರಿಗೆ ನೇರವಾಗಿ ಎಚ್ಚರಿಕೆ ನೀಡಿದ ನಂತರ ಇದೀಗ ಮಂಡ್ಯ ಶಾಸಕ ರವಿಕುಮಾರ್ ಗಾಣಿಗ ಕನ್ನಡ ನಟರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅದರಲ್ಲೂ ಮುಖ್ಯವಾಗಿ ನಟಿ ರಶ್ಮೀಕಾ ಮಂದಣ್ಣ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಕನ್ನಡ ಕಾರ್ಯಕ್ರಮಗಳ ಬಗ್ಗೆ ನಟರು ಏಕೆ ಅಸಡ್ಡೆ ಹೊಂದಿದ್ದಾರೆ? ಎಂದು ಶಾಸಕ ರವಿಕುಮಾರ್ ಗಾಣಿಗ ಶಾಸಕ ಚಿತ್ರರಂಗದವರನ್ನು ಟಾರ್ಗೆಟ್ ಮಾಡಿದ್ದಾರೆ. ಕಳೆದ ವರ್ಷ ಸಿನಿಮೋತ್ಸವಕ್ಕೆ ನಟಿ ಆಹ್ವಾನ ನೀಡಲಾಗಿದೆ, ಸಮಯವಿಲ್ಲ ಬರಲು ಆಗುವುದಿಲ್ಲ ಎಂದು ಬಂದಿರಲಿಲ್ಲ ಎಂದು ಶಾಸಕ ಗಾಣಿಗ ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಚಿತ್ರರಂಗದವರು ಬಾಯಿ ಮುಚ್ಚಿಕೊಳ್ಳಬೇಕು. ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರಗಳ ಮೂಲಕ ಬೆಳೆದವರು. ಕಳೆದ ವರ್ಷ ಚಲನಚಿತ್ರೋತ್ಸವಕ್ಕೆ ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ ನಾನು ಹೈದರಾಬಾದ್‌ನಲ್ಲಿದ್ದೇನೆ, ನನಗೆ ಸಮಯವಿಲ್ಲ, ನಾನು ಬರುವುದಿಲ್ಲ ಎಂದು ಹೇಳಿದ್ದಾರೆ. ಇಂತವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ-ಡಿಸಿಎಂಗೆ ಪತ್ರ ಬರೆಯುತ್ತೇನೆ. ಸಿನಿಮಾ ಸಬ್ಸಿಡಿ ನಿಲ್ಲಿಸುವುದನ್ನು ಪರಿಗಣಿಸಿ ಎಂದು ಎಂದಿದ್ದಾರೆ . ಆಂಧ್ರದ ನರಸಿಂಹಲು ಡಿಕೆಶಿ ವಿರುದ್ಧ ಮಾತನಾಡುತ್ತಾರೆ. ಆಂಧ್ರಪ್ರದೇಶದಿಂದ ಬಂದು ಹಣ ಕದ್ದು ನಮ್ಮ ಬಗ್ಗೆ ಮಾತನಾಡುತ್ತಾನೆ. ಸಿಸಿಎಲ್ ಮ್ಯಾಚ್ ಮೊನ್ನೆ ನಡೆದಿದ್ದು, ಆಗ ನಿಲ್ಲಿಸಬೇಕಿತ್ತು. ಇದು ಕೊನೆಯ ಎಚ್ಚರಿಕೆ. ಚಲನಚಿತ್ರ ಮಂಡಳಿಯವರು ಬಾಯಿ ಮುಚ್ಚಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!