ಉದಯವಾಹಿನಿ, ಕೋಲಾರ: ಆದಿಶೈವ ಬ್ರಹ್ಮಸೂತ್ರ ಬಾಷ್ಯಾ ಕರ್ತ ಶ್ರೀಕಂಠಶಿವಾಚಾರ್ಯ ಗುರು ಜಯಂತಿ ಮಹೋತ್ಸವವು ಕೋಲಾರ ನಗರದ ಪ್ರಸನ್ನ ನಂಜುಂಡೇಶ್ವರಸ್ವಾಮಿ ದೇವಾಲಯದಲ್ಲಿ ಶ್ರದ್ದಭಕ್ತಿಗಳಿಂದ ನೆರವೇರಿತು.

ಪ್ರಾತಃಕಾಲದಲ್ಲಿ ಶ್ರೀ ಮಹಾಗಣಪತಿ ಪ್ರಾರ್ಥನೆ, ಮಹಾನ್ಯಾಸ ಪಾರಾಯಣ, ಪಂಚಾಮೃತ ಅಭಿಷೇಕ ರುದ್ರಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗಗಳು ನಡೆದವು.
ಕೋಲಾರ ಜಿಲ್ಲಾ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಸಂಘದ ಜಿಲ್ಲಾಧ್ಯಕ್ಷ ಡಾ.ಕೆ.ಎಸ್.ಮಂಜುನಾಥ್ ದೀಕ್ಷಿತ್ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದು ಗುರುಗಳ ಆಶೀರ್ವಾದವನ್ನು ನೆರವೇರಿಸಿದರು.ಅನೇಕ ವೇದ ವಿದ್ವಾಂಸರಿಂದ ವೇದ ಪಾರಾಯಣ, ಆಗಮ ವಿದ್ವಾಂಸರಿಂದ ಆಗಮಶಾಸ್ತ್ರ ಪಾರಾಯಣಗಳು ನೆರವೇರಿಸಲಾಯಿತು.
ಎಲ್ಲಾ ಶೈವದೀಕ್ಷಾ ಕುಟುಂಬಗಳು ಹಾಗೂ ಶೈವ ಹಿರಿಯ ಅರ್ಚಕ ಎಸ್.ಪುಟ್ಟಶಾಮಿ ದೀಕ್ಷಿತ್ (ತಂಬಿಹಳ್ಳಿ), ಸುವರ್ಣ ಕರ್ನಾಟಕ ಶೈವಾಗಮ ಮಂಡಳಿಯ ರಾಜ್ಯ ಉಪಾಧ್ಯಕ್ಷ ಕೆ.ಎಂ.ವೆಂಕಟೇಶ್ ದೀಕ್ಷಿತ್, ಸ್ಥಾನಿಕಂ ಎಸ್.ಮೃತ್ಯುಂಜಯ ಶಂಕರ್ ದೀಕ್ಷಿತ್, ಶನೇಶ್ವರ ದೇವಾಲಯದ ಅನಂತ ದೀಕ್ಷಿತ್, ಸೋಮೇಶ್ವರಸ್ವಾಮಿ ದೇವಾಲಯದ ವೆಂಕಟೇಶ್ ದೀಕ್ಷಿತ್, ಎಸ್.ಕಣ್ವನಾಥ್ ದೀಕ್ಷಿತ್, ಮುಳಬಾಗಿಲು ಹೆಚ್.ಎಸ್.ಗುರುಮೂರ್ತಿ ದೀಕ್ಷಿತ್, ದೇವಾಲಯದ ಸಮಿತಿಯ ಸಿ.ಎಸ್.ರಾಘವೇಂದ್ರಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!