ಉದಯವಾಹಿನಿ, ಮೂಡಿಗೆರೆ: ತಾಲ್ಲೂಕಿನ ಕೊಟ್ಟಿಗೆಹಾರದ ತರುವೆ ಗಾಮದಲ್ಲಿ 2 ದಿನಗಳಿಂದ ಕಾಡಾನೆ ಬೀಡುಬಿಟ್ಟಿದ್ದು ಗ್ರಾಮಸ್ಮರಲ್ಲಿ ಆತಂಕ ಮೂಡಿಸಿದೆ.
ತರುವೆ ಚೌಡೇಶ್ವರಿ ದೇವಸ್ಥಾನದ ಸುತ್ತಮುತ್ತ ಇರುವ ಕಾಫಿ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದೆ. ಹಗಲು ವೇಳೆ ಅರಣ್ಯ ಸೇರುವ ಕಾಡಾನೆಯು, ಸಂಜೆಯಾಗುತ್ತಿದ್ದಂತೆ ಮನೆಯಂಗಳಕ್ಕೆ ಬಂದು ದಾಳಿ ನಡೆಸುತ್ತಿದೆ. ಕಾಫಿ ತೋಟದಲ್ಲಿ ಬೆಳೆದ ಅಡಿಕೆ, ತೆಂಗು, ಬಾಳೆ ಬೆಳೆಯನ್ನು ಸಂಪೂರ್ಣವಾಗಿ ನಾಶಗೊಳಿಸಿದ್ದು, ಗ್ರಾಮದ ಹಲವರಿಗೆ ನಮ್ಮ ಉಂಟಾಗಿದೆ. ದಾಳಿ ಮಾಡುತ್ತಿರುವ ಕಾಡಾನೆಯನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
