ಉದಯವಾಹಿನಿ,ಬೆಂಗಳೂರು: ಬಿಜೆಪಿ ಅವಧಿಯಲ್ಲಿ ಮಾಡಿದ್ದ ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ ರದ್ದು ಸೇರಿದಂತೆ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ 2022 ತಿದ್ದುಪಡಿ ರದ್ದು ಮಾಡಲು ಸಂಪುಟ ನಿರ್ಧಾರ ಕೈಗೊಂಡಿದೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದರು. ಬಿಜೆಪಿ ಅವಧಿಯಲ್ಲಿ ಜಾರಿಗೆ ತಂದಿದ್ದ, ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ ಸಾಕಷ್ಟು ವಿವಾದವನ್ನು‌ ಹುಟ್ಟು ಹಾಕಿತ್ತು. ಮತಾಂತರ ತಡೆಯುವ ನಿಟ್ಟಿನಲ್ಲಿ ಈ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಬಿಜೆಪಿ ಸರ್ಕಾರ ಸಮರ್ಥಿಸಿಕೊಂಡಿತ್ತು. ಆದರೆ ಸದನದಲ್ಲಿ ಕಾಂಗ್ರೆಸ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆದರೆ ಇದೀಗ ಮೂರನೇ ಕ್ಯಾಬಿನೆಟ್ ಸಭೆಯಲ್ಲೇ ಮತಾಂತರ ನಿಷೇಧ ಕಾಯ್ದೆಗೆ ಕೊಕ್ ಕೊಡಲಾಗಿದೆ. ಈ ಕುರಿತಾದ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಕಾನೂನು‌‌ ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು.
ಇಂದಿನ ಸಚಿವ ಸಂಪುಟ ಸಭೆಯ ಮಹತ್ವದ ನಿರ್ಣಯಗಳು
ಹಿಂದಿನ ಬಿಜೆಪಿ ಸರಕಾರದ ಮತಾಂತರ ನಿಷೇಧ ಕಾಯಿದೆ ತಿದ್ದುಪಡಿ ರದ್ದು ಮಾಡಲು ( ವಾಪಸ್) ತೀರ್ಮಾನ. ಅದಕ್ಕಾಗಿ ಇದೇ ಅಧಿವೇಶನದಲ್ಲಿ ಹೊಸ ಕಾನೂನು ತಿದ್ದುಪಡಿ ವಿಧೇಯಕ.
ಎಪಿಎಂಸಿ ಕಾಯಿದೆ ತಿದ್ದುಪಡಿ ವಾಪಸ್.
ಈ ಸಾಲಿನಲ್ಲೇ ಪಠ್ಯ ಪರಿಷ್ಕರಣೆ.
ಕನ್ನಡ & ಸಮಾಜ ವಿಜ್ಞಾನ ವಿಷಯಗಳ ೬ ರಿಂದ ೧೦ ನೇ ತರಗತಿ ಪಠ್ಯದಲ್ಲಿ ಬದಲಾವಣೆ (೪೫ ಬದಲಾವಣೆ).
– ನೆಹರು, ಅಂಬೇಡ್ಕರ್ ಕುರಿತ ಪಠ್ಯ ಸೇರ್ಪಡೆ
– ಹೆಡ್ಗೆವಾರ್, ಸೂಲಿಬೆಲೆ ಮತ್ತಿತರ ಪಠ್ಯಕ್ಕೆ ಕೊಕ್.

Leave a Reply

Your email address will not be published. Required fields are marked *

error: Content is protected !!