ಉದಯವಾಹಿನಿ, ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಗೆ ಒಂದಷ್ಟು ಹೊಸ ಯೋಜನೆಗಳನ್ನು ಘೋಷಿಸಿದ್ದರೂ, ಬಹುತೇಕ ಯೋಜನೆಗಳ ಅನುಷ್ಠಾನಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಸರ್ಕಾರ ನೀಡಿದ 15 ಸಾವಿರ ಕೋಟಿ ಅನುದಾನವೇ ಆಧಾರವಾಗಿದೆ. ಈ ಭಾಗದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆ ಉದ್ದೇಶದಿಂದ ಕೆಕೆಆರ್‌ಡಿಬಿ ಅಸ್ತಿತ್ವಕ್ಕೆ ಬಂದಿದೆ. ರಾಜ್ಯ ಸರ್ಕಾರ ಜಿಲ್ಲೆಗೆ ನೀಡಬೇಕಾದ ಅನುದಾನದ ಜೊತೆಗೆ ಹೆಚ್ಚುವರಿಯಾಗಿ ಕೆಕೆಆರ್‌ಡಿಬಿಯಿಂದಲೂ ಅನುದಾನ ಬಂದರೆ ಈ ಭಾಗದ ಜಿಲ್ಲೆಗಳ ಪ್ರಗತಿಗೆ ವೇಗ ಸಿಗುತ್ತಿತ್ತು. ಸರ್ಕಾರವೇ ನೇರವಾಗಿ ಅಸಮತೋಲನ ನಿವಾರಣೆಗೆ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಬೇಕಿತ್ತು. ಆದರೆ ಈಗಿನ ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಮಂಜೂರು ಮಾಡಿದ ಬಹುತೇಕ ಯೋಜನೆಗಳಿಗೆ ಅನುದಾನ ನೀಡುವ ಹೊಣೆ ಕೆಕೆಆರ್‌ಡಿಬಿ ಮೇಲೆ ಹೊರಿಸಿದೆ.
ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆ, ಯಲಬುರ್ಗಾ-ಕುಕನೂರು ಎರಡು ಹಂತದಲ್ಲಿ ಕೆರೆ ತುಂಬಿಸುವ ಯೋಜನೆ ಕಾರ್ಯಗತಿಗೆ ಕ್ರಮ ವಹಿಸಲಾಗಿದೆ.
