ಉದಯವಾಹಿನಿ, ಬೀದರ್: ಬೀದರ್-ಬೆಂಗಳೂರು ನಡುವೆ ಪುನಃ ವಿಮಾನ ಹಾರಾಟಕ್ಕೆ ದಿನಗಣನೆ ಆರಂಭವಾಗಿದೆ. ವಿಮಾನ ಹಾರಾಟಕ್ಕೆ ಎದುರಾಗಿದ್ದ ಎಲ್ಲ ತಾಂತ್ರಿಕ ವಿಷಯಗಳನ್ನು ಪೂರೈಸಲಾಗಿದ್ದು, ಏಪ್ರಿಲ್ 15ರಿಂದ ವಿಮಾನ ಸೇವೆ ಶುರು ಮಾಡಲು ಸ್ಮಾರ್ ಏರ್‌ಲೈನ್ಸ್ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಸ್ಮಾರ್ ಏರ್‌ಲೈನ್ಸ್ ಆನ್‌ಲೈನ್‌ನಲ್ಲಿ ವಿಮಾನದ ಟಿಕೆಟ್ ಬುಕ್ಕಿಂಗ್ ಕೂಡ ಆರಂಭಗೊಂಡಿದೆ. ಪ್ರತಿದಿನ ವಿಮಾನ ಹಾರಾಡಲಿದೆ. ಬೆಳಿಗ್ಗೆ 7.45ಕ್ಕೆ ಬೆಂಗಳೂರಿನಿಂದ ಬೀದರ್ ಕಡೆಗೆ, ಅದೇ ದಿನ ಬೆಳಿಗ್ಗೆ 9.30ಕ್ಕೆ ಬೀದರ್‌ನಿಂದ ಬೆಂಗಳೂರಿಗೆ ವಿಮಾನ ಸಂಚರಿಸಲಿದೆ. ವಿಮಾನ ಸೇವೆ ಶುರುವಾಗುವ ವಿಷಯವನ್ನು ಜಿಲ್ಲಾಡಳಿತವು ‘ ಖಚಿತಪಡಿಸಿದೆ. ಆದರೆ, ಇನ್ನಷ್ಟೇ ಅಧಿಕೃತವಾಗಿ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಕಿದೆ. ವಿಮಾನದ ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿರುವುದಕ್ಕೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.ಬಹು ದಿನಗಳ ನಿರೀಕ್ಷೆ ಕೊನೆಗೂ ಕೈಗೂಡಿದ ಸಂಭ್ರಮದಲ್ಲಿದ್ದಾರೆ.
