ಉದಯವಾಹಿನಿ, ನವದೆಹಲಿ: ಫುಲ್ ಟೈಟ್ ಆಗಿ ರೈಲು ಹಳಿ ಮೇಲೆ ಮಲಗಿದ್ದ ವ್ಯಕ್ತಿಗೆ ರೈಲು ಡಿಕ್ಕಿ ಹೊಡೆದರೂ ಆತ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಪೆರುವಿನಲ್ಲಿ ನಡೆದಿದೆ. ರೈಲು ಹಳಿಗಳ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬ ಶನಿವಾರ ಸರಕು ರೈಲಿಗೆ ಡಿಕ್ಕಿ ಹೊಡೆದ ನಂತರ ಹೇಗೋ ಬದುಕುಳಿದಿದ್ದಾನೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಹಳಿ ಮೇಲೆ ಮಲಗಿದ್ದ ವ್ಯಕ್ತಿ ಮೇಲೆ ರೈಲು ಹಾದು ಹೋದರೂ ಆತ ಪವಾಡ ಸದೃಶ್ಯದಂತೆ ಬದುಕುಳಿದ್ದಾನೆ ಎಂದು ಲಿಮಾ ಪ್ರಾಂತ್ಯದ ಅಟೆ ಪಟ್ಟಣದ ಭದ್ರತಾ ಅಧಿಕಾರಿ ಜನರಲ್ ಜೀವಿಯರ್ ಅವಲೋಸ್ ತಿಳಿಸಿದ್ದಾರೆ.
ಅವರು ಅಮಲಿನಲ್ಲಿದ್ದರು. ರೈಲು ಹಳಿಗಳ ಉದ್ದಕ್ಕೂ ನಿದ್ರೆಗೆ ಜಾರಿದ್ದರು ಮತ್ತು ರೈಲು ಬರುವುದನ್ನು ಗಮನಿಸಲಿಲ್ಲ ಎಂದು ಅವಾಲೋಸ್ ಹೇಳಿದರು. ಪೆರುವಿಯನ್ ಆಂಡಿಸ್ ಕಡೆಗೆ ನಿಯಮಿತವಾಗಿ ಚಲಿಸುತ್ತಿದ್ದ ರೈಲು 28 ವರ್ಷದ ಜುವಾನ್ ಕಾರ್ಲೋಸ್ ಟೆಲೊಗೆ ಡಿಕ್ಕಿ ಹೊಡೆದಿದೆ.
ಕಣ್ಣಾವಲು ತುಣುಕಿನಲ್ಲಿ ಲೋಕೋಮೋಟಿವ್ ರೈಲು ಯುವಕನನ್ನು ಹಲವಾರು ಮೀಟರ್ ದೂರ ಎಳೆಯುತ್ತಿರುವುದನ್ನು ತೋರಿಸುತ್ತದೆ. ಆದರೂ ಅವರ ಎಡಗೈಗೆ ಸಣ್ಣ ಗಾಯಗಳಾಗಿವೆ ಎಂದು ಅವಾಲೋಸ್ ಹೇಳಿದರು. ಈ ರೈಲು ಮಾರ್ಗದಲ್ಲಿ ಅಪಘಾತಗಳು ಸಾಮಾನ್ಯವಾಗಿದೆ.
