ಉದಯವಾಹಿನಿ, ಬೆಂಗಳೂರು : ಪ್ರಾಣಿಗಳ ಜೀವನಶೈಲಿ ಅಭಿವೃದ್ಧಿಯು ರೈತರಿಗೆ ಆರ್ಥಿಕವಾಗಿ ಹಾಗೂ ಉದ್ಯಮಶೀಲತೆಗೆ ದಾರಿ ದಾರಿಯಾಗಲಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ. ವೆಂಕಟೇಶ್ ಅವರು ಹೇಳಿದರು.
ಇಂದು ಹೆಬ್ಬಾಳದಲ್ಲಿರುವ ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನ ಸಭಾಂಗಣದಲ್ಲಿ, ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯು ರಾಷ್ಟ್ರೀಯ ವೈಜ್ಞಾನಿಕ ಸಮಾವೇಶ ಮತ್ತು ೨೨ನೇ ರಾಷ್ಟ್ರೀಯ ಪಶುವೈದ್ಯಕೀಯ ವಿಜ್ಞಾನ ವಿದ್ವನ್ಮಂಡಲಿ (ಭಾರತ) ಸಮಾರಂಭವನ್ನು ಆಯೋಜಿಸಿತ್ತು. “ಅತ್ಯುತ್ತಮ ಜಾನುವಾರು, ಕೋಳಿ ಸಾಕಾಣೆ, ಆರೋಗ್ಯ ರಕ್ಷಣೆ ಮತ್ತು ಉತ್ಪಾದನೆ ಹಾಗೂ ಸಾಕುಪ್ರಾಣಿಗಳ ಪೋಷಣೆಗೆ ಸವಾಲುಗಳು ಮತ್ತು ಆದ್ಯತೆ” ಎಂಬ ವಿಷಯದಡಿ ನಡೆದ ಈ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಸಾಕುಪ್ರಾಣಿಗಳ ಆಹಾರ ಪದ್ಧತಿ ಹವಾಮಾನಕ್ಕೆ ಅನುಗುಣವಾಗಿ ಬದಲಾಗುತ್ತಿದ್ದು, ಇದರ ಪರಿಣಾಮವಾಗಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಸವಾಲುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಮತ್ತು ಸಾಕುಪ್ರಾಣಿಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎರಡು ದಿನಗಳ ಈ ಸಮಾವೇಶವು ಮಾರ್ಗದರ್ಶನ ನೀಡಲಿದೆ” ಎಂದು ಅವರು ಹೇಳಿದರು.
ಸಣ್ಣ ಉದ್ಯಮಶೀಲತೆಯ ಉತ್ತೇಜನ ಮತ್ತು ಪಶುಪಾಲಕರ ಲಾಭದಾಯಕ ಅಭಿವೃದ್ಧಿಯ ದೃಷ್ಟಿಯಿಂದ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಸಿ. ವೀರಣ್ಣ, ನವದೆಹಲಿ ಪ್ರಾಣಿ ವಿಜ್ಞಾನ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಕೃಷಿ ಉಪ ಮಹಾನಿರ್ದೇಶಕ ಡಾ. ರಾಘವೇಂದ್ರ ಭಟ್, ಭಾರತೀಯ ಪಶುವೈದ್ಯಕೀಯ ಪರಿಷತ್ತಿನ (ನವದೆಹಲಿ) ಅಧ್ಯಕ್ಷ ಡಾ. ಉಮೇಶ್ ಚಂದ್ರ ಶರ್ಮ, ರಾಷ್ಟ್ರೀಯ ಪಶುವೈದ್ಯಕೀಯ ವಿಜ್ಞಾನ ವಿದ್ವನ್ಮಂಡಲಿ (ಓಂಗಿS) ಪೋಷಕರಾದ ಡಾ. ಕೆ.ಎಂ. ಬುಜರ್ಬರುವಾ, ಓಂಗಿS ಅಧ್ಯಕ್ಷರಾದ ಡಾ. ಡಿ.ವಿ.ಆರ್. ಪ್ರಕಾಶ್ ರಾವ್, ಆಡಳಿತ ಮಂಡಳಿ ಸದಸ್ಯ ಶ್ರೀಮತಿ ಲತಾ ಡಿ.ಎಚ್., ಪಶುವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಸೇರಿದಂತೆ ಅನೇಕ ಗಣ್ಯರು ಮತ್ತು ವೃತ್ತಿಪರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!