ಉದಯವಾಹಿನಿ, ಬೆಂಗಳೂರು : ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ನೀಡುತ್ತಿರುವ ಅಡುಗೆ ಎಣ್ಣೆ ಮತ್ತು ಬೇಳೆಕಾಳುಗಳನ್ನು ವಿಳಂಬವಾಗದಂತೆ ವಿತರಣೆ ಮಾಡುತ್ತೇವೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದರು.
ವಿಧಾನಪರಿಷತ್‌ ಸದಸ್ಯ ಅನಿಲ್‌ಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಎಣ್ಣೆ ಮತ್ತು ಬೇಳೆಕಾಳು ವಿತರಣೆಯಲ್ಲಿ ವಿಳಂಬವಾಗಿರುವುದರ ಬಗ್ಗೆ ನಮಗೆ ನಿರ್ಽಷ್ಟ ದೂರು ಬಂದಿಲ್ಲ. ಹಾಗೊಂದು ವೇಳೆ ಎಲ್ಲಾದರೂ ದೂರು ಬಂದರೆ ತಕ್ಷಣವೇ ಕ್ರಮಕೈಗೊಳ್ಳುವ ಆಶ್ವಾಸನೆ ನೀಡಿದರು.
ರಾಜ್ಯ ಸರ್ಕಾರವು ಈ ಯೋಜನೆಯ ಅನುದಾನವನ್ನು ಕಾಲಕಾಲಕ್ಕೆ ಬಿಡುಗಡೆ ಮಾಡುತ್ತದೆ. ನಮ್ಮಿಂದ ಯಾವುದೇ ರೀತಿಯ ವಿಳಂಬವಾಗಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರದಿಂದ ವಿಳಂಬವಾಗಿದ್ದರೆ ಸಂಬಂಧಪಟ್ಟ ಅಽಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ಮೊಟ್ಟೆ ಮತ್ತು ಬಾಳೆಹಣ್ಣು ನೀಡಲಾಗುತ್ತಿದೆ. ಈವರೆಗೆ ಮೂರು ದಿನ ಮಾತ್ರ ಮೊಟ್ಟೆ ನೀಡಲಾಗುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಇದಕ್ಕಾಗಿ ವಿಶೇಷ ಅನುದಾನವನ್ನು ಘೋಷಣೆ ಮಾಡಿರುವುದರಿಂದ ವಾರದಲ್ಲಿ 5 ಮೊಟ್ಟೆಯನ್ನು ವಿತರಿಸುವುದಾಗಿ ತಿಳಿಸಿದರು.
ನಾಲ್ಕೂವರೆ ರೂ.ಗೆ ಒಂದರಂತೆ ಮೊಟ್ಟೆಯನ್ನು ಖರೀದಿ ಮಾಡಬೇಕಾಗುತ್ತದೆ ಎಂದು ಸಚಿವರು ಹೇಳಿದಾಗ ಕೆಲವು ಸದಸ್ಯರು ಆಕ್ಷೇಪಿಸಿದರು. ಈಗಿನ ದಿನಗಳಲ್ಲಿ 4.50 ರೂ.ಗೆ ಮೊಟ್ಟೆ ಸಿಗುವುದು ಕಷ್ಟ. 6 ರೂ. ನೀಡಿದರೂ ಸಿಗುವುದಿಲ್ಲ. ಮಕ್ಕಳಲ್ಲಿ ಪೌಷ್ಟಿಕಾಂಶ ಆಹಾರ ಕೊಡುವಾಗ ಮಕ್ಕಳಿಗೆ ಕಡಿಮೆ ಗುಣಮಟ್ಟದ ಮೊಟ್ಟೆ ಏಕೆ ವಿತರಿಸುತ್ತೀರಿ ಎಂದು ಹಲವು ಸದಸ್ಯರು ಪ್ರಶ್ನೆ ಮಾಡಿದರು.
ಆಗ ಉತ್ತರಿಸಿದ ಸಚಿವರು, ಶೀಘ್ರದಲ್ಲೇ ಹಣಕಾಸು ಇಲಾಖೆ ಅಽಕಾರಿಗಳ ಜೊತೆ ಸಭೆ ನಡೆಸಲಾಗುವುದು. ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಹೆಚ್ಚಿನ ಮೊತ್ತ ಪಾವತಿಸಿ ಗುಣಮಟ್ಟದ ಮೊಟ್ಟೆಯನ್ನು ವಿತರಣೆ ಮಾಡುವುದಾಗಿ ಹೇಳಿದರು. ನಮಗೆ ಅಜೀಜ್‌ ಪ್ರೇಮ್‌ಜೀ ಅವರು ಅನುದಾನ ನೀಡಲು ಮುಂದೆ ಬಂದಿದ್ದಾರೆ. ಹೀಗಾಗಿ ಹಣದ ಸಮಸ್ಯೆ ಎದುರಾಗುತ್ತದೆ. ಕೆಲವು ಸಂದರ್ಭದಲ್ಲಿ ಮೊಟ್ಟೆಯನ್ನು ಸಾಗಿಸುವ ವೇಳೆ ಒಡೆದುಹೋಗುವ ಇಲ್ಲವೇ ಸಣ್ಣಪುಟ್ಟ ತೊಂದರೆಗಳು ಎದುರಾಗುವುದಿಲ್ಲ.

Leave a Reply

Your email address will not be published. Required fields are marked *

error: Content is protected !!