ಉದಯವಾಹಿನಿ, ಸೇಡಂ: ತಾಲೂಕಿನ ಹಾಬಳ್ (ಟಿ) ಗ್ರಾಮದ ನಾಲ್ವರು ಯುವಕರು ತೇಲ್ಕೂರ್ ಕ್ರಾಸ್ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಹಾಬಳ್ (ಟಿ) ಗ್ರಾಮದಲ್ಲಿರುವ ಮೃತರ ಮನೆಗೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲರು ಭೇಟಿ ನೀಡಿ, ಅವರ ಕುಟುಂಬದವರಿಗೆ ಸಾಂತ್ವನ ತಿಳಿಸಿದರು.ಬಾಳಿ ಬದುಕಬೇಕಿದ್ದ ಯುವಕರು ದಾರುಣ ಸ್ಥಿತಿಯಲ್ಲಿ ಮೃತಪಟ್ಟಿರುವುದು ನೋವಿನ ಸಂಗತಿಯಾಗಿದೆ. ಮನೆಗೆ ಬೆಳಕಾಗಬೇಕಿದ್ದ ನಂದಾದೀಪಗಳು ಕಣ್ಮರೆಯಾಗಿರುವುದು ನಿಜಕ್ಕೂ ದುಃಖದ ವಿಷಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಕುಟುಂಬಕ್ಕೆ ವೈಯಕ್ತಿಕ ಧನಸಹಾಯ ನೀಡಿದ್ದು, ಜೊತೆಗೆ ಸರ್ಕಾರದ ಮಟ್ಟದಲ್ಲಿ ಪರಿಹಾರ ಒದಗಿಸಲಾಗುತ್ತದೆ ಎಂದು ಕುಟುಂಬವರಿಗೆ ಸಚಿವರು ಭರವಸೆ ನೀಡಿದರು. ಈ ವೇಳೆಯಲ್ಲಿ ಮಾಜಿ ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಸತೀಶ್ ಪೂಜಾರಿ ಸೇರಿದಂತೆ ಹಲವರು ಇದ್ದರು
