ಉದಯವಾಹಿನಿ, ಅಣ್ಣಿಗೇರಿ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಸುಕ್ಷೇತ್ರ ಮಣಕವಾಡ ಗ್ರಾಮದ ಶ್ರೀ ಗುರು ಅನ್ನದಾನೇಶ್ವರ ದೇವ ಮಂದಿರ ಮಹಾಮಠ ಅಭಿವೃದ್ಧಿಗೆ ಸರಕಾರ ಒಂದು ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಶಾಸಕ ಎನ್.ಎಚ್.ಕೋನರಡ್ಡಿ ಅವರು ಸರಕಾರದ ಆದೇಶ ಪತ್ರವನ್ನು ಶ್ರೀಗಳಿಗೆ ಹಸ್ತಾಂತರಿಸಿದರು.
ಮಹಾಸ್ವಾಮಿಗಳಾದ ನಿರಂಜನ ಜ್ಯೋತಿ ಮೃತ್ಯುಂಜಯ ” ಅಜ್ಜನ ಸಂಭ್ರಮ 2025 ” ಕಳೆದ ಎಂಟು ದಿನಗಳಿಂದ ನಡೆದ ಈ ಕಾರ್ಯಕ್ರಮ ಪ್ರಯುಕ್ತ ನಡೆದ ಸಮಾರೋಪ ಸಮಾರಂಭ ಸಾನಿಧ್ಯವನ್ನು ಶ್ರೀ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಗದಗ, ಶ್ರೀ ಮಂನಿರಂಜನ್ ಜಗದ್ಗುರು ಡಾ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಶಿವಮೊಗ್ಗ ಶ್ರೀ ಸದಾಶಿವ ಮಹಾಸ್ವಾಮಿಗಳು ಹುಕ್ಕೇರಿಮಠ, ಹಾವೇರಿ, ಶ್ರೀ ಸದಾಶಿವ ಅಭಿನವ್ ಸಿದ್ಧಾರೂಢ ಮಹಾಸ್ವಾಮಿಗಳು ಶಾಂತಾಶ್ರಮ, ಹುಬ್ಬಳ್ಳಿ, ಶ್ರೀ ಚಂದ್ರಶೇಖರ್ ಶಿವಾಚಾರ್ಯ ಸ್ವಾಮಿಗಳು, ಮುತ್ತಿನ ಕಂಠಿಮಠ, ಅಕ್ಕಿ ಆಲೂರ ಹಾಗೂ ಶ್ರೀ ಡಾ ಮಹಾಂತ ಪ್ರಭು ಮಹಾಸ್ವಾಮಿಗಳು ವಿರಕ್ತಮಠ, ಶೇಗುಣಸಿ ವಹಿಸಿದ್ದರು.
