ಉದಯವಾಹಿನಿ, ಬೆಂಗಳೂರು : ಯುಗಾದಿ ಹಬ್ಬದ ಪ್ರಯುಕ್ತ ಆಂಧ್ರಪ್ರದೇಶದಲ್ಲಿರುವ ಶ್ರೀ ಶೈಲ ಮಹಾಕ್ಷೇತ್ರದಲ್ಲಿ ಯುಗಾದಿ ಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಮಾ. ೨೭ ರಿಂದ ಮಾ. ೩೧ ರವರೆಗೆ ನಡೆಯುವ ಹಿನ್ನಲೆ ಸ್ವಾಮಿಯವರ ಅಲಂಕಾರ ದರ್ಶನಕ್ಕೆ ಮಾತ್ರ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ಮಾ. ೧೭ ರಿಂದ ೨೬ರ ವರೆಗೆ ಭಕ್ತರಿಗೆ ಪ್ರತಿದಿನ ನಿರ್ದಿಷ್ಟ ಸಮಯಗಳಲ್ಲಿ ೪ ಹಂತಗಳಲ್ಲಿ ಶ್ರೀ ಸ್ವಾಮಿಯನ್ನು ಪಾದ ಸ್ಪರ್ಶಿಸುವ ಸ್ಪರ್ಶ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಕರೆಂಟ್ ಬುಕ್ಕಿಂಗ್ ಮೂಲಕ ಮತ್ತು ಆನ್‌ಲೈನ್ ನಲ್ಲಿ ೫೦೦ ರೂ. ಶುಲ್ಕ ಪಾವತಿಸಿ ಸ್ಪರ್ಶ ದರ್ಶನ ಟಿಕೆಟ್‌ಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ.
ಈ ಉತ್ಸವದಲ್ಲಿ ಕರ್ನಾಟಕ ರಾಜ್ಯದಿಂದ ವಿಶೇಷವಾಗಿ ಉತ್ತರ ಕರ್ನಾಟಕದ ಭಕ್ತರು ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ, ಸಾಂಗ್ಲಿ ಹಾಗೂ ಇತರ ಭಾಗಗಳಿಂದ ಕೂಡ ಭಕ್ತರು ಸೇರುತ್ತಾರೆ. ಹಲವು ಪ್ರದೇಶಗಳಿಂದ ಭಕ್ತರು ಪಾದಯಾತ್ರೆಯೊಂದಿಗೆ ಶ್ರೀಶೈಲಕ್ಕೆ ಆಗಮಿಸುತ್ತಿರುವುದು ವಿಶೇಷ. ಸುಮಾರು ೨ಲಕ್ಷ ಮಂದಿ ಮೇಲೆ ಭಕ್ತರು ಪಾದಯಾತ್ರೆಯೊಂದಿಗೆ ಈ ಉತ್ಸವಗಳಿಗೆ ಆಗಮಿಸಲಿದ್ದು,
ಯುಗಾದಿ ಮಹೋತ್ಸವಗಳಲ್ಲಿ ಸರ್ವಭಕ್ತರಿಗೆ ಅನುಕೂಲವಾದ ದರ್ಶನಕ್ಕಾಗಿ ಅಂದರೆ ೨೭ರಿಂದ ೩೧ರವರಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಅಲಂಕಾರಿಕ ದರ್ಶನವನ್ನು ಏರ್ಪಡಿಸಿದ್ದು ಯುಗಾದಿ ಉತ್ಸವ ದಿನಗಳಲ್ಲಿ ಸ್ವಾಮಿಯ ಸ್ಪರ್ಶ ದರ್ಶನಕ್ಕೆ ಅವಕಾಶವಿಲ್ಲ. ಆದಾಗ್ಯೂ ಉತ್ಸವಗಳ ೧೦ ದಿನಗಳ ಹಿಂದಿನಿಂದ ಅಂದರೆ ಮಾ. ೧೭ ರಿಂದ ೨೬ರವರೆಗೆ ಭಕ್ತರಿಗೆ ಪ್ರತಿದಿನ ನಿರ್ದಿಷ್ಟ ಸಮಯಗಳಲ್ಲಿ ನಾಲ್ಕು ಹಂತಗಳಾಗಿ ಶ್ರೀಸ್ವಾಮಿಯನ್ನು ಸ್ಪರ್ಶಿಸುವ ಸ್ವರ್ಶದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಈ ಸ್ಪರ್ಶ ದರ್ಶನದ ನಿಗದಿಪಡಿಸಲಾಗಿದೆ. ಪ್ರತಿ ಹಂತದಲ್ಲಿ ೧೫೦೦ ಟಿಕೆಟ್‌ಗಳನ್ನು ಮಾತ್ರ ನೀಡಲಾಗುವುದು. ಭಕ್ತರು ನಿರ್ದಿಷ್ಟ ಸಮಯಗಳಲ್ಲಿ ಕರೆಂಟ್ ಬುಕಿಂಗ್ ಮೂಲಕ ಈ ಟಿಕೆಟ್‌ಗಳನ್ನು ದೇವಸ್ಥಾನದಲ್ಲಿಯೇ ಪಡೆಯಬಹುದು ಮತ್ತು ಅನ್‌ಲೈನ್ ಮೂಲಕ ಈ ಟಿಕೆಟ್‌ಗಳನ್ನು ಪಡೆಯಬಹುದಾಗಿದೆ.
