ಉದಯವಾಹಿನಿ, ಕೆ.ಆರ್.ಪುರ : ವರ್ಷಕ್ಕೊಮ್ಮೆಯಾದರು ಕಿಡ್ನಿಗಳ ತಪಾಸಣೆ ಮಾಡಿ ಕಿಡ್ನಿಗಳ ಆರೋಗ್ಯ ಕಾಪಾಡಿಕೊಳ್ಳಿ ಎಂದು ಮೆಡಿಕವರ್ ಆಸ್ಪತ್ರೆಯ ಯುನಿಟ್ ಹೆಡ್ ಜಿ ಕೃಷ್ಣಮೂರ್ತಿ ಅವರು ತಿಳಿಸಿದರು.ಮಹದೇವಪುರ ಕ್ಷೇತ್ರದ ವೈಟ್‌ಫೀಲ್ಡ್ ಸಮೀಪದ ಮೆಡಿಕವರ್ ಆಸ್ಪತ್ರೆಯಲ್ಲಿ ವಿಶ್ವ ಕಿಡ್ನಿ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಜೀವನ ಶೈಲಿ, ಆಹಾರ ಪದ್ಧತಿಯಿಂದ ಅನೇಕ ಸಮಸ್ಯೆಗಳಿಂದ ಕಿಡ್ನಿ ಸಮಸ್ಯೆ ಹೆಚ್ಚುತ್ತಿದೆ, ಆದ್ದರಿಂದ ಆರು ತಿಂಗಳಿಗೆ ಒಮ್ಮೆ ಅಥವಾ ವರ್ಷಕ್ಕೆ ಒಮ್ಮೆಯಾದರೂ ಕಿಡ್ನಿಗಳ ತಪಾಸಣೆ ಮಾಡಿಸಿಕೊಳ್ಳಿ ಎಂದರು.
ಕಿಡ್ನಿ ಸಮಸ್ಯೆಗೆ ಮುಕ್ತಿ ನೀಡಲ ಮಾರ್ಚ್ ೩೧ರವರೆಗೂ ಸಾರ್ವಜನಿಕರಿಗೆ ಉಚಿತ ಕಿಡ್ನಿ ತಪಾಸಣೆ ಮಾಡುತ್ತಿದೆ ಎಲ್ಲರಿಗೂ ಪಡೆದುಕೊಳ್ಳಿ ಎಂದು ನೆಪ್ರೋಲಿಸ್ಟ್ ಡಾ. ರವಿಶಂಕರ್ ಮನವಿ ಮಾಡಿಕೊಂಡಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲಿ ರೋಬೋಟಿಂಗ್ ಶಸ್ತ್ರ ತಜ್ಞ ಪ್ರಮೋದ್ ಶಿವರಾಮ್ ಭಟ್, ಆಸ್ಪತ್ರೆಯ ಮೆಡಿಕಲ್ ಮುಖ್ಯಸ್ಥೆ, ಡಾ. ಶೃತಿ ಕೋಯ್ಲಿ, ಮಾರ್ಕೆಂಟಿಕ್ ಮುಖ್ಯಸ್ಥ ಪ್ರಮೋದ್ ಭಾಗಿಯಾಗಿದ್ದರು.
