ಉದಯವಾಹಿನಿ, ವಿಜಯಪುರ: ರನ್ಯಾ ರಾವ್ ಪ್ರಕರಣದ ಹಿಂದೆ ಒಂದು ದೊಡ್ಡ ಜಾಲವಿದ್ದು, ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಈ ಪ್ರಕರಣದಲ್ಲಿ ರಾಜಕಾರಣಿಗಳು, ಮಂತ್ರಿಗಳು, ಪೆÇೀಲಿಸ್ ಅಧಿಕಾರಿಗಳು ಇರಬಹುದು. ಆ ಹೆಣ್ಣುಮಗಳಿಗೆ ಪೆÇೀಲಿಸ್ ಸೆಕ್ಯೂರಿಟಿ ಕೊಡುತ್ತಿದ್ದರು. ಆ ಹೆಣ್ಣುಮಗಳಿಗೆ ಪೆÇ್ರೀಟೋಕಾಲ್ ಮೆಂಟೇನ್ ಮಾಡುತ್ತಿದ್ದರು. ಇದೊಂದು ದೊಡ್ಡ ಜಾಲ ಎಂದರು.
ಇದು ನಮ್ಮ ರಾಜ್ಯದ ಗೃಹ ಮಂತ್ರಿ, ರಾಜ್ಯ ಸರ್ಕಾರದಿಂದ ನ್ಯಾಯ ಸಿಗಲ್ಲ. ಈ ಪ್ರಕರಣ ಸಿಬಿಐಗೆ ವಹಿಸಿದರೆ ಮಾತ್ರ ನ್ಯಾಯ ಸಿಗುತ್ತದೆ. ಇದರಲ್ಲಿರುವ ರಾಜಕಾರಣಗಳಾಗಲೀ, ಅಧಿಕಾರಗಳಾಗಲಿ ಯಾರೇ ಇದ್ದರೂ ಅವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದರು.
ಅವರ ತಂದೆ ಹುದ್ದೆ ಅವರು ಬಳಸಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಸಚಿವರಿರಬಹುದು, ಉನ್ನತ ಪೆÇೀಲಿಸ್ ಅಧಿಕಾರಿಗಳಿರಬಹುದು, ಇದು ಸಿಬಿಐ ತನಿಖೆ ಆಗಬೇಕು. ರನ್ಯಾ ಗೆ ಇಷ್ಟೆಲ್ಲ ಸೆಕ್ಯೂರಿಟಿ ಯಾಕೆ ಕೊಟ್ಟರು ಎಂದರು.
ಈ ರನ್ಯಾ ಪ್ರಕರಣದಲ್ಲಿ ಕೇಂದ್ರದ ಕಸ್ಟಮ್ ಅಧಿಕಾರಿಗಳು ಸೇರಿದಂತೆ ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!