ಉದಯವಾಹಿನಿ, ಅರಕಲಗೂಡು: ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿಯ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿಯಿಂದ ಬೆಳೆ ನಾಶ ಮುಂದುವರೆದಿದೆ.
ಮಾಗೋಡು ಗ್ರಾಮದ ವೇದಕುಮಾರ್ ಅವರ ಕಾಫಿ ತೋಟಕ್ಕೆ ಗುರುವಾರ ರಾತ್ರಿ ನುಗ್ಗಿರುವ ಕಾಡಾನೆಗಳ ಹಿಂಡು ಕಾಫಿ, ಅಡಿಕೆ ಗಿಡಗಳನ್ನು ನಾಶಗೊಳಿಸಿವೆ.
ಸುತ್ತಮುತ್ತಲ ಗ್ರಾಮಗಳಾದ ಪಾರಸನಹಳ್ಳಿ, ಕೋಠಿ, ನೆಲಬಳ್ಳಿ ಮುಂತಾದ ಗ್ರಾಮಗಳಲ್ಲಿ 6 ಆನೆಗಳಿರುವ ಗುಂಪು ತಿರುಗುತ್ತಿದ್ದು ಜನರನ್ನು ಭಯಭೀತರನ್ನಾಗಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
