ಉದಯವಾಹಿನಿ, ಮುಂಡರಗಿ: ‘ಸಮಾಜದಲ್ಲಿ ಒಳ್ಳೆಯವರಾಗಿ ಗುರುತಿಸಿಕೊಳ್ಳುವುದು.
ಕಷ್ಟವಾಗಿದ್ದು, ವಿದ್ಯಾರ್ಥಿಗಳು ತಮ್ಮ ಓದಿನೊಂದಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು’ ಎಂದು ಮಾಜಿ ಸಚಿವ 2.2. 3.
ತಾಲ್ಲೂಕಿನ ಡಂಬಳ ಹೋಬಳಿಯ ಬರದೂರ ಗ್ರಾಮದ ಜ್ಞಾನಸ್ಪೂರ್ತಿ ಶಾಲೆಯ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾನಿಧ್ಯ ವಹಿಸಿದ ಕಪ್ಪತಗುಡ್ಡ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ನೆರವಾಗುತ್ತವೆ.
ವಿದ್ಯಾರ್ಥಿಗಳು ಕಾರ್ಯಕ್ರಮಗಳಲ್ಲಿ ಮುಕ್ತವಾಗಿ ಪಾಲ್ಗೊಳ್ಳಬೇಕು’ ಎಂದರು.
ಬಿಇಒ ಎಚ್.ಎಂ.ಫಡೇಶಿ ಮಾತನಾಡಿ, ‘ಗ್ರಾಮಿಣ ಭಾಗದ ವಿದ್ಯಾರ್ಥಿಗಳಲ್ಲಿ ವಿಶೇಷ ಪ್ರತಿಭೆಗಳು ಅಡಗಿರುತ್ತದೆ. ವಿದ್ಯಾರ್ಥಿಗಳು ಕೀಳರಿಮೆಯನ್ನು ಬದಿಗಿಟ್ಟು ಮುಕ್ತವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು’ ಎಂದು ತಿಳಿಸಿದರು.
ಗುರುಮೂರ್ತಿಸ್ವಾಮಿ ಇನಾಮದಾರ, ಶಾಲಾ ಸಮಿತಿ ಕಾರ್ಯದರ್ಶಿ ಮೋಹನ ಚಟೇರ್ ಮಾತನಾಡಿದರು. ಬಿಗ್‌ಬಾಸ್ ಖ್ಯಾತಿಯ ಹನುಮಂತ ಲಮಾಣಿ, ಗಾಯಕಿ ಮನನ್ಯಾ ಹಾಗೂ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಗೌರಮ್ಮ ನಾಡಗೌಡ, ಸಿಪಿಐ ಮಂಜುನಾಥ ಕುಸಗಲ್ಲ, ಗಂಗಾಧರ ಅಣ್ಣಿಗೇರಿ, ಪಾರ್ವತಿ ಚಟೀರ, ವೀರನಗೌಡ ನಾಡಗೌಡ, ಸತ್ಯಪ್ಪ ತಳವಾರ, ಎಂ.ಜಿ.ಗಚ್ಚಣ್ಣವರ, ಎಂ.ಎಂ.ಹೆಬ್ಬಾಳ, ಎನ್.ಎಂ.ಕುಕನೂರ. ಹೆಚ್.ಎನ್.ಗೌಡ್ರ, ಹನಮಪ್ಪ ನಾಡಗೌಡರ, ಶಿವಲೀಲಾ ಕುಂಬಾರ, ತೇಜಸ್ವಿನಿ ಕುಕನೂರು, ಪ್ರಕಾಶ ಇಮ್ಮಡಿ, ಶಿವಾನಂದ ಲಮಾಣಿ, ಎಸ್.ವಿ.ಅಡರಗಟ್ಟಿ, ಎಸ್.ವಿ.ಅರಿಶನದ ಉಪಸ್ಥಿತರಿದ್ದರು.
