ಉದಯವಾಹಿನಿ, ಕೋಲಾರ : ಮಾಲೂರು ತಾಲೂಕಿನ ಮಾಕರಹಳ್ಳಿ ಬಳಿ ಕ್ರಷರ್‌ನಲ್ಲಿ ಬಂಡೆ ಒಡೆಯಲು ಬ್ಲಾಸ್ಟ್ ಮಾಡುವಾಗ ಕಲ್ಲು ಬಿದ್ದು ಅವಘಡ ಸಂಭವಿಸಿದೆ.
ಈ ಘಟನೆಯಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಇಬ್ಬರು ಗಾಯಗೊಂಡಿದ್ದಾರೆ.ಮೃತ ಕಾರ್ಮಿಕನನ್ನು ಆಂಧ್ರಪ್ರದೇಶದ ನಿವಾಸಿ ವೆಂಕಟೇಶ್ (೬೦) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಹರೀಶ್ ಮತ್ತು ಈಶ್ವರ್ ಗಾಯಗೊಂಡಿದ್ದಾರೆ. ಬಂಡೆ ಸ್ಫೋಟಕ್ಕೆ ತಯಾರಿ ನಡೆಸುತ್ತಿದ್ದ ವೇಳೆ ಕಲ್ಲು ಬಿದ್ದು ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಇಲ್ಲಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
