ಉದಯವಾಹಿನಿ, ವಾಷಿಂಟನ್: ಯೆಮೆನ್‌ನಲ್ಲಿ ಹೌತಿ ಹಿಡಿತದಲ್ಲಿರುವ ಪ್ರದೇಶಗಳ ಮೇಲೆ ಸರಣಿ ವೈಮಾನಿಕ ದಾಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಆದೇಶ ನೀಡಿದ್ದಾರೆ. ಇರಾನ್ ಬೆಂಬಲಿತ ಬಂಡುಕೋರರು ಪ್ರಮುಖ ಕಡಲ ಕಾರಿಡಾರ್‌ನಲ್ಲಿ ಹಡಗು ಸಾಗಣೆಯ ಮೇಲಿನ ದಾಳಿಯನ್ನು ನಿಲ್ಲಿಸುವವರೆಗೆ ಅಗಾಧ ಮಾರಕ ಶಕ್ತಿಯನ್ನು ಬಳಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಹು ಹೌತಿ ನಾಯಕರನ್ನು ಗುರಿಯಾಗಿಟ್ಟುಕೊಂಡು ದಾಳಿಗಳು ಯಶಸ್ವಿಯಾಗಿವೆ, ನಮ್ಮ ವೀರ ಯೋಧರು ಇದೀಗ ಭಯೋತ್ಪಾದಕರ ನೆಲೆಗಳು, ನಾಯಕರು ಮತ್ತು ಕ್ಷಿಪಣಿ ರಕ್ಷಣೆಗಳ ಮೇಲೆ ವೈಮಾನಿಕ ದಾಳಿಯನ್ನು ನಡೆಸುತ್ತಿದ್ದಾರೆ, ಅಮೆರಿಕದ ಹಡಗು, ವಾಯು ಮತ್ತು ನೌಕಾ ಆಸ್ತಿಗಳನ್ನು ರಕ್ಷಿಸಲು ಮತ್ತು ಶಾಂತಿ ಪುನಃಸ್ಥಾಪಿಸಲು ಕಠಿನ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಯಾವುದೇ ಭಯೋತ್ಪಾದಕ ಶಕ್ತಿಯು ಅಮೆರಿಕದ ವಾಣಿಜ್ಯ ಮತ್ತು ನೌಕಾ ಹಡಗುಗಳನ್ನು ವಿಶ್ವದ ಜಲಮಾರ್ಗಗಳಲ್ಲಿ ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಬಂಡುಕೋರ ಗುಂಪನ್ನು ಬೆಂಬಲಿಸುವುದನ್ನು ನಿಲ್ಲಿಸುವಂತೆ ಇದೇ ವೇಲೆ ಇರಾನ್ ಗೆ ಎಚ್ಚರಿಕೆ ನೀಡಿದ್ದಾರೆ. ಇರಾನ್‌ ಮುಂದುವರಿದ ಪರಮಾಣು ಕಾರ್ಯಕ್ರಮದ ಕುರಿತು ದ್ವಿಪಕ್ಷೀಯ ಮಾತುಕತೆಗಳನ್ನು ಪುನರಾರಂಭಿಸುವ ಬಗ್ಗೆ ಇರಾನ್ ನಾಯಕರಿಗೆ ಅಮೆರಿಕ ಪತ್ರವನ್ನು ಕಳುಹಿಸಿದ ಎರಡು ವಾರಗಳ ನಂತರ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!