ಉದಯವಾಹಿನಿ,ಗದಗ: ‘ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಕನಸು ಹೊತ್ತು ಶ್ರಮಿಸುತ್ತಿರುವ ಸರ್ಕಾರದ ಗುರಿ ಸಾಧನೆಗೆ ಕೆ.ಎಚ್. ಪಾಟೀಲರು ಬಿಟ್ಟುಹೋದ ಆದರ್ಶಗಳು ದಾರಿದೀಪವಾಗಿದೆ. ಈ ನಿಟ್ಟಿನಲ್ಲಿ ಗದುಗಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಕೆ.ಎಚ್. ಪಾಟೀಲರ ಹೆಸರನ್ನು ನಾಮಕರಣ ಮಾಡಲು ನಮ್ಮ ಸರ್ಕಾರ ಕ್ರಮವಹಿಸಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
‘ಮಾಜಿ ಸಚಿವ, ದಿ. ಕೆ.ಎಚ್. ಪಾಟೀಲ ಅವರು ನಾಡಿನ ಜನಮೆಚ್ಚಿದ ನಾಯಕ. ಸಹಕಾರ ರಂಗಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ ಅವರು ನಿಷ್ಠುರವಾದಿ ಹಾಗೂ ಪ್ರಾಮಾಣಿಕ ರಾಜಕಾರಣಿ ಎಂದೇ ಜನಜನಿತರರಾಗಿದ್ಧರು’ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಗದುಗಿನ ಹುಲಕೋಟಿಯ ಗ್ರಾಮೀಣ ಸೊಗಡಿನೊಂದಿಗೆ ಬೆಳೆದ ಪಾಟೀಲರು ಶಾಸಕರಾಗಿ, ಸಚಿವರಾಗಿ, ಸಹಕಾರ ಧುರೀಣರಾಗಿ ಬೆಳದ ಪರಿ ಅನನ್ನ ಅವರು ವ್ಯಾವಹಾರಿಕ ಅರ್ಥದ ರಾಜಕಾರಣಿಯಾಗಿರಲಿಲ್ಲ.
ದಾರ್ಶನಿಕ ಧುರೀಣರಾಗಿದ್ದರು. ರಾಜಕಾರಣಿಗಳು ಮುಂದಿನ ಚುನಾವಣೆಯ ಬಗ್ಗೆ ಯೋಚಿಸಿದರೆ, ದಾರ್ಶನಿಕ ಮುಂದಿನ ಜನಾಂಗದ ಬಗ್ಗೆ ಯೋಚಿಸುತ್ತಾರೆ ಕೆ.ಎಚ್. ಪಾಟೀಲರು, ಭವಿಷ್ಯವನ್ನು ಉತ್ತಮಗೊಳಿಸುವ ರೈತರ ಹಿತ ಕಾಪಾಡುವ, ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡುವ ಆಶಯವನ್ನು ಸದಾ ಹೊಂದಿದ್ದರು. ತಮ್ಮ ಆದರ್ಶಗಳಿಂದಾಗಿ ಅವರು ಇತರರಿಗೆ ಅನುಕರಣೀಯರಾಗಿದ್ದರು’ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!