ಉದಯವಾಹಿನಿ, ಕಲಬುರಗಿ: ಸರ್ಕಾರದ ವಿವಿಧ ಯೋಜನೆಗಳಡಿ ಬಿಡುಗಡೆಯಾದ ಅಕ್ಕಿಯನ್ನು ಅಕ್ರಮವಾಗಿ ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ತಹಶೀಲ್ದಾರ ಕಾರ್ಯಾಲಯದ ಆಹಾರ ನಿರೀಕ್ಷಕ ವಿನಯ ಎಂ, ಸಬ್ ಅರ್ಬನ್ ಪೊಲೀಸ್ ಠಾಣೆಯ ಎಎಸ್‍ಐ ಜೈರಾಮ ರಾಠೋಡ್ ಅವರು ದಾಳಿ ನಡೆಸಿ 1,41,375 ರೂ.ಮೌಲ್ಯದ 43.50 ಕ್ವಿಂಟಲ್ ಅಕ್ಕಿ ಮತ್ತು 6 ಲಕ್ಷ ರೂ.ಮೌಲ್ಯದ ಮಹೇಂದ್ರ ಪಿಕಪ್ ವಾಹನ ಸೇರಿ 7,41,375 ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ವಾಹನ ಚಾಲಕ ಕಿರಣ್ ಫಿರೋಜ್ ಹಾಗೂ ಅಕ್ಕಿಯ ಮಾಲೀಕ ಸಂತೋಷಗೌಡ ಹಾಗೂ ಕೃಷ್ಣ ಲಾತೂರ ಅವರ ವಿರುದ್ಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
