ಉದಯವಾಹಿನಿ, ಗದಗ: ಪ್ರತಿ ವರ್ಷ ಎರಡು ಲಕ್ಷಕ್ಕೂ ಅಧಿಕ ಪ್ರವಾಸಿಗರನ್ನು ಸೆಳೆಯುವ ಇಲ್ಲಿನ ಗದಗ ಮೃಗಾಲಯವನ್ನು ಅಭಿವೃದ್ಧಿ ವಿಷಯದಲ್ಲಿ ಮತ್ತೊಂದು ಹಂತ ಮೇಲಕ್ಕೆತ್ತುವ ಯೋಜನೆಯನ್ನು ಅರಣ್ಯ ಇಲಾಖೆ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರ ರೂಪಿಸಿದ್ದು. ಅದರಂತೆ ಗದಗ ಮೃಗಾಲಯವು ಹುಬ್ಬಳ್ಳಿ- ಹೊಸಪೇಟೆ ಹೆದ್ದಾರಿವರೆಗೆ ವಿಸ್ತರಣೆಗೊಳ್ಳಲಿದೆ. ಪ್ರಸ್ತುತ 40.02 ಎಕರೆಯಲ್ಲಿರುವ ಮೃಗಾಲಯವು ಹೊಸ ಸೌಲಭ್ಯಗಳ ಜತೆಗೆ 13.20 ಎಕರೆಯಷ್ಟು ವಿಸ್ತಾರಗೊಳ್ಳಲಿದೆ. ಹೆದ್ದಾರಿಗೆ ಹೊಂದಿಕೊಂಡಂತೆ ಆಕರ್ಷಕ ಪ್ರವೇಶದ್ವಾರ ನಿರ್ಮಾಣ ಈ ಯೋಜನೆಯ ಪ್ರಮುಖ ಭಾಗವಾಗಿದೆ. ಜತೆಗೆ ಆಯಂಪಿಥಿಯೇಟರ್ ನಿರ್ಮಾಣ, ಕ್ಲಾಕ್‌ರೂಮ್ ಸೌಲಭ್ಯ, ಪುಡ್ಕೋರ್ಟ್- ರೆಸ್ಟೋರೆಂಟ್ ಸ್ಥಾಪನೆ, ಕರಕುಶಲ ವಸ್ತುಗಳ ಮಾರಾಟ ಮಳಿಗೆ, ವಿಶಾಲವಾದ ಪಾರ್ಕಿಂಗ್ ಏರಿಯಾ ಸೇರಿದಂತೆ ಪ್ರವಾಸಿಗರಿಗೆ ಅತ್ಯಾಧುನಿಕ ಹಾಗೂ ಆರಾಮದಾಯಕ ಸೌಲಭ್ಯಗಳನ್ನು ಕಲ್ಪಿಸಲು ಯೋಜಿಸಲಾಗಿದೆ.
ಅರಣ್ಯ ಸಚಿವರಾಗಿದ್ದ ಕೆ.ಎಚ್. ಪಾಟೀಲ ಅವರಿಂದ 1972ರಲ್ಲಿ ಪ್ರಾರಂಭಗೊಂಡ ಬಿಂಕದಕಟ್ಟಿ ಮೃಗಾಲಯ ಅಭಿವೃದ್ಧಿ ವಿಚಾರದಲ್ಲಿ ಆರಂಭದಿಂದ ಈವರೆಗೆ ಗಮನಾರ್ಹ ಹೆಜ್ಜೆಗಳನ್ನು ಇರಿಸುತ್ತ ಬಂದಿದೆ. ಪ್ರಸ್ತುತ ಗದಗ ಮೃಗಾಲಯವು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಗುರುತಿಸಿಕೊಂಡಿದೆ. ಪ್ರವಾಸಿಗರಿಗೆ ಮನರಂಜನೆ ಜತೆಗೆ ಮಾಹಿತಿಯನ್ನೂ ಒದಗಿಸುತ್ತಿದೆ.

Leave a Reply

Your email address will not be published. Required fields are marked *

error: Content is protected !!