ಉದಯವಾಹಿನಿ,ಬೆಂಗಳೂರು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದು ಮಾಜಿ ಸಚಿವ ಗೋವಿಂದ ಕಾರಜೋಳ, ಸಂಸದ ಪಿಸಿ ಮೋಹನ್, ಎಂಎಲ್ ಸಿ ರವಿಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭ ಮಾತನಾಡಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದು ‘ರಾಜ್ಯದ ಬಡ ಜನತೆಗೆ 10 kg ಅಕ್ಕಿ ಕೊಡುತ್ತೇವೆ ಎಂದು ರಾಜ್ಯದ ಜನತೆಗೆ ಮೋಸ ಮಾಡುತಿದ್ದಾರೆ. ದೋಖಾ ಕಾರ್ಯಕ್ರಮ ಘೋಷಿಸಿ ಮಾತು ತಪ್ಪಿದ್ದು ರೈತರ, ಬಡವರು ಬಿಪಿಎಲ್ ಕಾರ್ಡ್ದಾರದರ ಆಪಾದನೆಯಿಂದ ಪಾರಾಗಲು ರಾಜಕಾರಣ ಮಾಡುತ್ತಿದ್ದಾರೆ’ ಎಂದಿದ್ದಾರೆ. ‘ಕೇಂದ್ರ ಸರ್ಕಾರವೇ 10 ಕೆಜಿ ಅಕ್ಕಿ ಉಚಿತವಾಗಿ ನೀಡಿದೆ’ಕೇಂದ್ರ ಸರಕಾರ ಪುಡ್ ಸೇಕ್ರೆಡ್ ಆಕ್ಟ್ ಪ್ರಕಾರ ಯಾವುದೇ ಖಚ್ಚು ಇಲ್ಲದೆ ರೆಷನ್ ಕೊಡುತ್ತಾ ಬಂದಿದೆ. 5 ಕೆಜಿ ಕೇಂದ್ರ ಸರಕಾರದಿಂದ ಸೇರಿಸಿ 10 kg ಕೊಡುತ್ತಿದ್ದೇವೆ ಎಂದು ಹೇಳಬೇಕಿತ್ತು. ಡಿಸೆಂಬರ್ ದಿಂದ ಗರೀಬ್ ಕಲ್ಯಾಣದಿಂದ 10kg ಅಕ್ಕಿ ಕೊಟ್ಟಿದ್ದೇವೆ. ಜುಲೈ ತಿಂಗಳಿನಿಂದ 10 KG ಅಕ್ಕಿ ನೀಡದೇ ಹೋದಲ್ಲಿ ಪ್ರತಿಭಟನೆ ಮಾಡುತ್ತೇವೆ.
