ಉದಯವಾಹಿನಿ, ಹಿರೇಬಾಗೇವಾಡಿ: ಹೆದ್ದಾರಿ ಪಕ್ಕ ಸರ್ವಿಸ್ ರಸ್ತೆಯಲ್ಲಿ ಗಾಂಜಾ ಮಾರಾಟಗಾರನನ್ನು ಹಿರೇಬಾಗೇವಾಡಿ ಪೊಲೀಸರು ಗುರುವಾರ ರಾತ್ರಿ ವಶಕ್ಕೆ ಪಡೆದು ₹9,500 ಬೆಲೆ ಬಾಳುವ 477 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಕೆ.ಕೆ.ಕೊಪ್ಪ ಗ್ರಾಮದ ಬೋರಪ್ಪ ಅರ್ಜುನ ಕರೆಣ್ಣವರ (26) ಬಂಧಿತ ಆರೋಪಿ.
ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
