ಉದಯವಾಹಿನಿ, ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 , ಈ ಬಾರಿ ಪ್ರತಿಷ್ಠೆಯ ಕಣವಾಗಿ ಧೂಳೆಬ್ಬಿಸುತ್ತಿದೆ. ಸೋಷಿಯಲ್ ಮೀಡಿಯಾ ತುಂಬಾ ದೊಡ್ಮನೆಯದ್ದೇ ಹವಾ.. ಬಿಗ್ ಬಾಸ್ ಫೈನಲ್ ಆಟಕ್ಕೆ ಕೌಂಟ್‌ಡೌನ್ ಶುರುವಾಗಿದ್ದು ಇಷ್ಟದ ಕಂಟೆಸ್ಟೆಂಟ್‌ಗಳ ಪರ ಸಖತ್ ವೋಟಿಂಗ್ ಕ್ರೇಜ್ ಶುರುವಾಗಿದೆ. ರಾಜಕೀಯ ನಾಯಕರಲ್ಲದೇ, ವಿವಿಧ ಸಂಘಟನೆಯ ಪ್ರಮುಖರು ತಮ್ಮಿಷ್ಟದ ಸ್ಪರ್ಧಿಗಳ ಪರ ಪ್ರಚಾರ ಶುರು ಮಾಡಿದ್ದಾರೆ.
ಈ ನಡುವೆ ಕರ್ನಾಟಕ ರಕ್ಷಣಾ ವೇದಿಕೆಯಲ್ಲೂ ಬಿಗ್ ಬಾಸ್ ಪ್ರತಿಷ್ಠೆಯ ಫೈಟ್ ಜೋರಾಗಿದೆ. ನಾರಾಯಣ ಗೌಡರು ಅಶ್ವಿನಿ ಗೌಡ (ಪರ ಬ್ಯಾಟ್ ಬೀಸಿದ್ರೆ, ಪ್ರವೀಣ್ ಶೆಟ್ಟಿ ಅವರು ಗಿಲ್ಲಿ ನಟನ ಪರ ಬ್ಯಾಟಿಂಗ್ ಮಾಡಿದ್ದಾರೆ. ಅಶ್ವಿನಿ ಗೌಡ ತನ್ನ ಶ್ರಮದಿಂದ, ಅನೇಕ ವಿಚಾರಗಳನ್ನ ಸಹಿಸಿಕೊಂಡು ಫೈನಲ್‌ಗೆ ಬಂದು ನಿಂತಿದ್ದಾರೆ. ಬಿಗ್ ಬಾಸ್ ಫೈನಲ್‌ಗೆ ಬರೋದು ಅಷ್ಟು ಸುಲಭವಲ್ಲ. ಕಳೆದ 20 ವರ್ಷಗಳಿಂದ ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಬಡವರ ನೋವು, ದುಃಖ ದುಮ್ಮಾನಗಳಿಗೆ ಗಟ್ಟಿಯಾಗಿ ನಿಂತಿದ್ದಾರೆ. ಅನೇಕ ಸಂದರ್ಭದಲ್ಲಿ ಕೇಸ್ ಹಾಕಿಸಿಕೊಂಡು, ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಎಲ್ಲ ಅನುಭವಗಳಿಂದ ಗಟ್ಟಿಯಾಗಿ ನಿಂತು ಫೈನಲ್ ತಲುಪಿದ್ದಾರೆ ಎಂದರು. ಗಿಲ್ಲಿ ಗೆದ್ರೆ ನಾಳೆ ಸಮಾಜಕ್ಕೆ ಏನು ಕೊಡಬಹುದು? ಅಶ್ವಿನಿ ಗೌಡ ಗೆದ್ರೆ ಇನ್ನೊಂದಿಷ್ಟು ವರ್ಷ ನನ್ನ ನಾಡು, ನನ್ನ ಸಂಸ್ಕ್ರತಿ ಅಂತಾ ಹೋರಾಟ ಮಾಡ್ತಾಳೆ. ನಾಡು ನುಡಿಗಾಗಿ ಬೀದಿಯಲ್ಲಿ ನಿಂತು 20 ಹೋರಾಟ ಮಾಡೋರನ್ನ ಬೆಂಬಲಿಸಬೇಕು. ಇನ್ನೊಬ್ಬರನ್ನ ಕಾಲು ಎಳೆದುಕೊಂಡು, ನಗಿಸಿಕೊಂಡು ಇರೋ ವ್ಯಕ್ತಿಯನ್ನ ಬೆಂಬಲಿಸಬೇಕಾ? ಕರವೇ ಆಯ್ಕೆ ಹೋರಾಟಗಾರ್ತಿ ಅಶ್ವಿನಿಗೌಡರನ್ನ ಬೆಂಬಲಿಸೋದು ಅಂತಾ ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ.
