ಉದಯವಾಹಿನಿ, ಬೆಂಗಳೂರು: ಪೀಣ್ಯ ದಾಸರಹಳ್ಳಿ ಸಮೀಪದ ದಾಸರಹಳ್ಳಿಯ ನೆಲೆ ಮಹೇಶ್ವರಮ್ಮ ದೇವಸ್ಥಾನದ ಆವರಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು ಘಟಕ, ವೀರಶೈವ- ಲಿಂಗಾಯಿತ ಕ್ಷೇಮಾಭಿವೃದ್ಧಿ ವೇದಿಕೆ ದಾಸರಹಳ್ಳಿ ಕ್ಷೇತ್ರ, ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ, ಕಾಯಕಯೋಗಿ ಸಹಕಾರ ಸಂಘ ನಿಯಮಿತ ಮತ್ತು ಅಕ್ಕಮಹಾದೇವಿ ಮಹಿಳಾ ಸಂಘದ ವತಿಯಿಂದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ೧೧೮ನೇ ಜನ್ಮದಿನೋತ್ಸವದ ಪ್ರಯುಕ್ತ ವಚನಾಮೃತ ಮತ್ತು ಆಧ್ಯಾತ್ಮಿಕ ಪ್ರವಚನ ವಚನ ಗೀತೆ, ಭಕ್ತಿ ಗೀತೆಯನ್ನು ರಾಯಚೂರು ಜಿಲ್ಲೆ ಮಹಾಂತೇಶ್ವರ ಮಠದ ಮಹಾಂತ ಮಹಾಸ್ವಾಮೀಜಿ ನಡೆಸಿಕೊಟ್ಟರು.

ಸಿದ್ದಗಂಗಾ ಮಠದ ಕಿರಿಯ ಸ್ವಾಮಿಗಳಾದ ಶಿವ ಸಿದ್ದೇಶ್ವರ ಮಹಾಸ್ವಾಮಿಗಳು, ವಿಜಿಪುರ ಮಠದ ಸದಾಶಿವ ಸ್ವಾಮಿಗಳು ಭಾಗವಹಿಸಿದರು. ೧೦೦೦ ಜನರಿಗೆ ಅನ್ನ ದಾಸೋಹವನ್ನು ದಾಸರಹಳ್ಳಿ ಕ್ಷೇತ್ರ ಘಟಕ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ವೈಬಿಎಚ್ ಜಯದೇವ್ ಅವರು ಏರ್ಪಡಿಸಿದ್ದರು. ವೇದಿಕೆಯ ಅಧ್ಯಕ್ಷ ಬಸವರಾಜಣ್ಣ, ಪಿ ಎಚ್ ರಾಜು, ಎಂ ಬಸವರಾಜ್, ಎಂ.ಕೆ ಜಗದೀಶ್, ಸೋಲಾರ್ ಸುಬ್ಬಣ್ಣ ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!