ಉದಯವಾಹಿನಿ, ಕೆಂಗೇರಿ: ಮಹಿಳೆಯರನ್ನು ಅಡಿಗೆ ಮನೆಗೆ ಸೀಮಿತಗೊಳಿಸಿದೆ ಉತ್ತಮ ಅವಕಾಶ ಸಹಕಾರ ಪ್ರೋತ್ಸಾಹ ನೀಡುವ ಮೂಲಕ ಅವರ ಪ್ರತಿಭೆ ಅನಾವರಣಗೊಳಿಸಲು ದೃಢ ಸಂಕಲ್ಪ ಮಾಡಬೇಕೆಂದು ಕೆಪಿಸಿಸಿ ವಕ್ತಾರೆ ಕುಸುಮಾ. ಹನುಮಂತರಾಯಪ್ಪ ಕರೆ ನೀಡಿದರು.

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ಲಕ್ಷ್ಮೀದೇವನಗರ ವಾರ್ಡ ನಂದಿನಿ ಬಡಾವಣೆಯಲ್ಲಿ ಆಯೋಜಿಸಿದ್ದ ಮಹಿಳಾ ಬಹಳ ದಿನಾಚರಣೆ ಹಾಗೂ ಕಾಂಗ್ರೆಸ್ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡವರು ಮಾತನಾಡಿದರು. ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ ಎಂದು ಬಣ್ಣಿಸಿದರು, ಮಹಿಳೆಯರ ಪ್ರಗತಿ ಬಗ್ಗೆ ಅಸೂಯೆ,ವಿರೋಧ ವ್ಯಕ್ತಪಡಿಸುವವರು ಇರುತ್ತಾರೆ, ಅಂಥವರ ಮಧ್ಯೆ ಎದ್ದು ನಿಲ್ಲುವುದೇ ನಿಜವಾದ ಮಹಿಳಾ ಶಕ್ತಿ ಎಂದು ತಿಳಿಸಿದರು. ಅಧಿಕಾರದಲ್ಲಿರುವ ಕೆಲವು ರಾಜಕಾರಣಿಗಳು ಮಹಿಳೆಯರ ಬಗ್ಗೆ ತುಚ್ಛಭಾವನೆ ಹೊಂದಿರುತ್ತಾರೆ, ಮಹಿಳೆಯರನ್ನು ಹೆದರಿಸಿ ಬೆದರಿಸಿ ಅತ್ಯಾಚಾರದಂತಹ ಹೀನ ಕೃತ್ಯವನ್ನು ಎಸೆಗಿ, ಎದುರಾಳಿಗಳನ್ನು ಹೆದರಿಸಲು ಎಚ್‌ಐವಿ ಏಡ್ಸ್ ನ ಇಂಜೆಕ್ಷನ್ ಅನ್ನು ಚುಚ್ಚಿ ಬೆದರಿಸುವವರು ಇದ್ದಾರೆ ಇಂಥವರ ನಡುವೆ ನ್ಯಾಯಕ್ಕಾಗಿ ಹೋರಾಟ ನಡೆಸಬೇಕಿರುವುದು ವಿಪರ್ಯಾಸ ಎಂದು ಪರೋಕ್ಷವಾಗಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಶಾಸಕಕರ ವಿರುದ್ಧ ಆರೋಪಗಳ ಸುರಿಮಳೆಗೈದರು.
ಕೆಪಿಸಿಸಿ ಸದಸ್ಯ ಬೆಟ್ಟಸ್ವಾಮಿ ಗೌಡ ಮಾತನಾಡಿ ರಾಜ್ಯ ಸರ್ಕಾರ ಬಡವರ ಪರವಾಗಿ ಅನೇಕ ಜನಪರ ಯೋಜನೆಗಳ ರೂಪಿಸಿದ್ದು ಅದರ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು. ಲೋಕಸಭಾ ಕ್ಷೇತ್ರದಲ್ಲಿ ಸೋತಿದ್ದರು ಮನೆಯಲ್ಲಿ ಕೂರದೆ ಮಾಜಿ ಲೋಕಸಭಾ ಸದಸ್ಯ ಡಿ.ಕೆ. ಸುರೇಶ ರವರು ಕ್ಷೇತ್ರದ ಜನರ ಪರವಾಗಿ ಹಗಲಿರುಳು ಜನತೆಯ ಸಮಸ್ಯೆ ಪರಿಹಾರಕ್ಕಾಗಿ ಶ್ರಮಿಸುತ್ತಿರುವುದು ಅವರ ಕಾರ್ಯವೈಕರಿಗೆ ಹಿಡಿದ ಕನ್ನಡಿ ಆಗಿದೆ ಎಂದು ತಿಳಿಸಿದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರು ಇದ್ದರೂ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!