ಉದಯವಾಹಿನಿ, ಬೆಂಗಳೂರು: ಸೈಬರ್ ಕ್ರೈಂ ದುಷ್ಕರ್ಮಿಗಳ ಹಾವಳಿ ರಾಜ್ಯ ಸರ್ಕಾರದ ಸಚಿವರಿಗೂ ತಟ್ಟಿದ್ದು, ಪ್ರಮುಖ ಸಚಿವರೊಬ್ಬರ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಲಾಗಿದೆ.
ನಗರಾಭಿವೃದ್ಧಿ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿರುವ ಸೈಬರ್ ಕಳ್ಳರು, ಸಿಕ್ಕ ಸಿಕ್ಕ ಬಳಕೆದಾರರಿಗೆ ಸಂದೇಶ ರವಾನೆ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಈ ಕುರಿತು ಖುದ್ದು ಸಚಿವ ಭೈರತಿ ಸುರೇಶ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ನನ್ನ ಫೇಸ್ ಬುಕ್ ಖಾತೆ ಹ್ಯಾಕ್ ಆಗಿದೆ. ಯಾವುದೇ ರೀತಿಯ ಮೇಸೆಜ್ ಗಳಿಗೆ ಯಾರು ಕೂಡ ಅನ್ಯತಾ ಭಾವಿಸಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನೊಂದೆಡೆ, ಫೇಸ್ ಬುಕ್ ನಲ್ಲಿ ಭೈರತಿ ಸುರೇಶ್ ಫೇಸ್ ಬುಕ್ ಖಾತೆ ಮೂಲಕ ಕೆಟ್ಟದಾಗಿ ಕಮೆಂಟ್ ಮಾಡಲಾಗಿದೆ ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಲಾಗಿದೆ.
