ಉದಯವಾಹಿನಿ, ವಿಜಯಪುರ: ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿ15 ವಾಹನಗಳು ಭಸ್ಮವಾಗಿರುವ ಘಟನೆ ನಗರದ ಗಾಂಧಿಚೌಕ್ ಪೆÇಲೀಸ್ ಠಾಣೆಯ ಹಿಂಭಾಗದ ಆವರಣದಲ್ಲಿ ನಡೆದಿದೆ.
ಅಪಘಾತ ಹಾಗೂ ಇತರೆ ಪ್ರಕರಣಗಳಲ್ಲಿ ಜಪ್ತಿ ಮಾಡಿದ ವಾಹನಗಳು ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದು, ವಾಹನಗಳ ಟೈರ್ ಗಳು ಸ್ಫೋಟಗೊಂಡಿವೆ.
ದಟ್ಟನೆ ಹೊಗೆ ಕಂಡು ಜನರು ಆತಂಕಕ್ಕೀಡಾಗಿದ್ದರು.
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಬಹಳ ಹೊತ್ತಿನ ನಂತರ ಬೆಂಕಿ ನಂದಿಸಲು ಸಾಧ್ಯವಾಯಿತು.
ಗಾಂಧಿಚೌಕ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
