ಉದಯವಾಹಿನಿ, ಬೆಂಗಳೂರು: ಪ್ರಧಾನಮಂತ್ರಿ ಮೋದಿಯವರ ಬಗ್ಗೆ ಪ್ರತಿದಿನ ಮಾತನಾಡದಿದ್ದರೆ, ನಿಮ್ಮ ಹೈಕಮಾಂಡ್ ನಿಮ್ಮನ್ನು ಎಲ್ಲಿ ಮೂಲೆಗುಂಪು ಮಾಡುತ್ತದೋ ಎಂಬ ಆತಂಕ ನಿಮ್ಮಲ್ಲಿ ಸ್ಪಷ್ಟವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್‌ಗೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಸುದೀರ್ಘ ಪೋಸ್‌್ಟ ಹಾಕಿರುವ ಅವರು, ಹರಿಪ್ರಸಾದ್ ಆರೋಪಕ್ಕೆ ಲೆಕ್ಕ ಚುಕ್ತ ಮಾಡಿದ್ದಾರೆ. ರಾಜಕೀಯವಾಗಿ ಪ್ರಸ್ತುತವಾಗಲು ಮೋದಿಯವರನ್ನು ನಿರಂತರ ಟೀಕಿಸುವುದು ನಿಮ್ಮ ಕಾಯಕ. ಆದರೆ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರ ಆಚಾರ-ವಿಚಾರಗಳು ನನಗೆ ಚೆನ್ನಾಗಿ ತಿಳಿದಿವೆ. ಅವುಗಳನ್ನು ಒಂದೊಂದೇ ಬಿಚ್ಚುತ್ತಾ ಹೋದರೆ, ಒಂದು ರಾಜಕೀಯ ನಾಟಕ ವೇ ರಚಿಸಬಹುದು. ಆ ನಾಟಕದಲ್ಲಿ ಹಿರಿಯರಾದ ತಮಗೆ ಒಂದು ಪಾತ್ರವನ್ನೂ ಕೊಡಬಹುದು. ಆದರೆ, ನಿಮ್ಮಷ್ಟು ತಳಮಟ್ಟದ ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಸಾಹೇಬರೇ, ಛಲವಾದಿಯ ಛಲ ಯಾವ ರೀತಿಯದು ಎಂಬುದು ನಿಮಗೆ ಗೊತ್ತಿಲ್ಲದ ವಿಷಯವಲ್ಲ. ನಿಮ್ಮ ಹಿರಿತನಕ್ಕೆ ಯಾವಾಗಲೂ ನನ್ನ ಗೌರವ ಇದ್ದೇಯಿದೆ. ಕಾಲೇಜು ದಿನಗಳಿಂದಲೂ ನಿಮ್ಮ ಹೋರಾಟ, ಗಾಂಽ ನಗರದಲ್ಲಿ ಚುನಾವಣೆಗೆ ಸ್ಪರ್ಽಸಿ, ಸೋತಾಗಿನ ಚೀರಾಟ, ಮತ್ತನೇಕ ವಿಷಯಗಳು ನನಗೆ ತಿಳಿಯದ್ದೇನಲ್ಲ ಬಿಡಿ. ಆದರೆ ನಿಮ್ಮ ಇತಿಹಾಸ ನಿಮ್ಮ ಯೋಗದ ಪ್ರತಿಲವೇ ಹೊರತು, ಅದು ಯೋಗ್ಯತೆ ಮತ್ತು ಹೋರಾಟದ ಪ್ರತಿಬಿಂಬವಲ್ಲ ಎಂಬುದು ನನಗೆ ಮಾತ್ರವಲ್ಲ ಅನೇಕರಿಗೆ ಗೊತ್ತಿರುವ ವಿಷಯವೇ ಸರಿ ಎಂದಿದ್ದಾರೆ.
